About Us

ಹವ್ಯಕ ಭಾಷೆಲಿ ಮೀಮ್ ಪೇಜ್ ಮಾಡಿರಕ್ಕಾಳಿ ಆಲೋಚನೆ ಬಂದ ಕೂಡ್ಲೆಯೇ 2017 ಜುಲೈ 9ಕ್ಕೆ ಹುಳಿಮೇಲಾರ ಹೇಳುವ ಪೇಜಿನ ಸುರು ಮಾಡಿದೆಯ. ಐದು ಜನ ಸೇರಿ ಮಾಡಿದ ಪೇಜಿಂಗೆ ಈಗ ಮೂರು ವರ್ಷ ಕಳ್ದಪ್ಪಗ ಮೀಮ್ ಪೇಜಿಂಗೆ ನಾವು ನಿಂಬದು ಬೇಡ, ಒಂದು ಬ್ಲಾಗ್ ಸುರು ಮಾಡುವ ಹೇಳಿ ಈಗ ಬ್ಲಾಗ್ ಸುರು ಮಾಡಿದ್ದೆಯ.
ನಮ್ಮ ಭಾಷೆಲಿಪ್ಪ ಕೆಲವೇ ಕೆಲವು ವೆಬ್‌ಸೈಟು / ಬ್ಲಾಗುಗಳಲ್ಲಿ ಹುಳಿಮೇಲಾರವೂ ಒಂದು.
ಈ ಹೆಸರೆಂತಕೆ ಕೇಳಿದಿರೋ?
ನಾವು ಹವ್ಯಕರು, ಮೇಲಾರ ನಮ್ಮ ಸಿಗ್ನೇಚರು. ಅಂಬಗ ಹುಳಿಯೋ, ಹಾಸ್ಯ ಇಪ್ಪ ಕಾರಣ ಅದು ಹುಳಿ. ಹೀಂಗೆ ಹುಳಿಮೇಲಾರ ಆತು.

ಈಗ ಬ್ಲಾಗಿಲಿ ಎಂತ ಮಾಡ್ತಿ? ಹೇಳಿ ಕೇಳಿರೆ, ಈಗ ಎಂಗೊಗೆ ನಿಂಗೊಗೆ ಎಂತೆಲ್ಲ ಬರವಲೆಡಿತ್ತು, ಆ ಬರದ್ದರ ಇನ್ನೊಬ್ಬನೂ ಓದಲೀಳಿ ಇಲ್ಲಿ ಹಾಕುದು. ಅದರೊಟ್ಟಿಂಗೆ ರಜ್ಜ ಸಮಯ ವಾಟ್ಸಾಪಿಲಿ ಅಂದ ಮೆಸ್ಸೇಜು ಕಂಡಿಪ್ಪಿ. ಹವ್ಯಕರ ವ್ಯವಹಾರ ಮಾಹಿತಿ ಕೇಂದ್ರೀಕರಣ. ಅದನ್ನೂ ಮಾಡ್ತೆಯ. ಅದಕ್ಕೆ ರಜ್ಜ ಸಮಯ ಹೆಚ್ಚಿಗೆ ಬೇಕು.

ನಿಂಗಳ ಮನೆಯ ಮಕ್ಕೊ ಎಂಗ, ಒಂದು ಹೊಸ ಕೆಲಸ ಸುರುಮಾಡಿದ್ದೆಯ. ನಿಂಗಳ ಆಶೀರ್ವಾದ ಎಂಗಳ ಮೇಲೆ ಇರಲಿ ಹೇಳಿ ಎಂಗಳ ಕೋರಿಕೆ.