ಅಂತೂ ಇಂತೂ ಈ ಮರಿಸುಗ್ರೀವ ವರಗೆಕ್ಕಾರೆ..

1
57
mari sugreeva

ಯೇವದೇ ದ್ರಾವಿಡ ಪ್ರಾಣಾಯಾಮಂಗಳೂ ವರ್ಕೌಟಾಗದ್ದೆ, ಅಂತೂ ಇಂತೂ ಎಲ್ಲಾ ಉರುಡಪ್ಪತ್ತ ಆಗಿ, ಕೊನೆಗೂ ನೆಡಿರುಳು12 ಗಂಟೆಗೆ ಈ ಮರಿಸುಗ್ರೀವ ಹಾಸಿಗೆ ಹತ್ತಿದ…

ಮರುಕ್ಷಣವೇ ಒಂದು ಆಜ್ಞೆ ಹೆರಟತ್ತು… #ಸುಗ್ರೀವಾಜ್ಞೆ

ಅಪ್ಪಾ… ಇಂದು ಅಮ್ಮಂಗೆ ತಲೆಬೂಬಿದ್ದಲ್ದಾ ? ಹಾಂಗಾಗಿ ನೀನೇ ಕತೆ ಹೇಳೆಕ್ಕೂ, ಎರಡು ಕತೆ….

ಅಯ್ಯನೆಬಂಡೆ…. ಇದಾತು ಕಥೆ….

ಹಾ ಅಕ್ಕು ಮಗಾ… ಈಗ ಮನುಗು…

ಇಲ್ಲೇ ಈಗಲೇ ಕತೆ ಹೇಳು…

ಅಕ್ಕು ಮಗಾ… ವೇಯ್ಟ್… ಆಲೋಚನೆ ಮಾಡ್ತೇ…

1 ನಿಮಿಷ ಅಪ್ಪಾಗ….

ಅಪ್ಪಾ ಕಥೆ….

ನಿಲ್ಲು, ಆಲೋಚನೆ ಮಾಡ್ತಾ ಇದ್ದೆ…

ಪುನಾ ಒಂದು ನಿಮಿಷ ….

ಅಪ್ಪಾ ಕಥೆ???

ನಿಲ್ಲಾ… ಎಂತಾ ಅರ್ಜೆಂಟ್ ನಿನಗೆ? ಆಲೋಚನೆ ಮಾಡೆಡದಾ? ಹಾಂಗೇ ಅರ್ಜೆಂಟೀಲ್ಲಿ ಕಥೆ ಬತ್ತಾ???

ಅಂತೂ ಇಂತೂ 5 ನಿಮಿಷ ತಳ್ಳಿ ಆತು…

ಅಪ್ಪಾ ಕಥೆ… ಸ್ವರ ರಜ್ಜ ಬದಲುವ ಲಕ್ಷಣ….

ಇನ್ನಾತಿಲ್ಲೆ , ಕಥೆ ಹೇಳದ್ರೆ ಪದ ಸುರು ಆವ್ತು ಈಗ…

ಎಂತ ಕಥೆ ಅಕ್ಕು ಮಗಾ???

ಹ್ಮ್ಮ್ಮ್ಮ್…….. ಆನೆ ಕಥೆ ಸಿಮ್ಮ ಕಥೆ….

ಓಕೆ… ದೊಡ್ಡಾನೆಯಾ ಸಣ್ಣಾನೆಯಾ?

ದೊಡ್ಡಾ ಆನೆ….

ಸರಿ, ದೊಡ್ಡ ಸಿಮ್ಮವಾ ಸಣ್ಣ ಸಿಮ್ಮವಾ?

ಸಣ್ಣ ಸಿಮ್ಮ…

ಅಂತೂ ಪಾತ್ರ ಹಂಚಿಕೆ, ಪಾತ್ರ ಪರಿಚಯ ಎಲ್ಲಾ ಮುಗುದು ಕಥೆ ಉಪಕ್ರಮ ಇನ್ನು…

ಒಂದಾsssssssನೊಂದು ಕಾಡಿಲ್ಲಿ ಒಂದು ದೋಡಾ ಆನೆ ಇತ್ತಡ…

ಒಂದು ದಿನಾ…. ಅದು ಮನಿಕ್ಕೊಂಡಿತ್ತಡ ಕಾಡಿಲ್ಲಿ…

ಆನೆ ಎಲ್ಲಿ ಮನುಗುದು ಮಗಾ? ಅದಕ್ಕೆ ಬೆಡ್ರೂಮ್ ಹಾಸಿಗೆ ಆರು ಹಾಸುದು ಮಗಾ???

ಅದಕ್ಕೆ ಹಾಸಿಗೆ ಇಲ್ಲೇ ಅಪ್ಪ…

ಅಂಬಗ ಅದು ಹೆಂಗೆ ಮನುಗುದು ಮಗಾ?

ಗೊಂತಿಲ್ಲೆ….

ಅದು ಬರೀ ಮಣ್ಣಿಲ್ಲೇ ಮನುಗುದು….

ಪಾಪ ಅಲ್ದಾ ಅಪ್ಪಾ?

ಅಷ್ಟಪ್ಪಾಗ….. ಒಂದು ಸಣ್ಣ ಸಿಮ್ಮ ಬಂತು ಅಲ್ಲ್ಯಾಗಿ….

ಎದುರು ಒಂದು ಆನೆ ಮನಿಕ್ಕೊಂಡು ಕಂಡತ್ತು…

ಆನೆ ಮನಿಕ್ಕೊಂಡು ಇತ್ತ ಕಾರಣ ಸಿಮ್ಮ ಗ್ರೇಶಿತ್ತು ಎಂತಾಳಿ?

ಇದು ಸಣ್ಣ ಆನೆ, ಇದರ ಕೊಂದು ತಿಂಬಲಕ್ಕೂ….

ದಬುಕ್ಕನೆ ಆನೆ ಮೇಲಂಗೆ ಹಾರಿತ್ತದ ಈ ಸಣ್ಣ ಸಿಮ್ಮ….

ಆನೆಗೆ ಹೆದರಿ ಲೋಕ ಇಲ್ಲೇ ಮಗಾ….

ದಡಬಡನೆ ಎದ್ದು ನಿಂದತ್ತು ಆನೆ…

ಯಬಾ ದೋಡಾ ಆನೆ ಅಲ್ದಾ ಅದು? ಆಆಆಅಷ್ಟು ಎತ್ತರ…

ಸಿಮ್ಮಕ್ಕೆ ಹೆದರಿ ಲೋಕ ಇಲ್ಲೇ….

ಅಷ್ಟು ಎತ್ತರಂದ ಇಳಿವಲೂ ಎಡಿಯ, ಹಾರ್ಲೂ ಎಡಿಯ… ಇನ್ನೆಂತ ಮಾಡುದಂಬಾಗ?

ಆನೆ ಓಡ್ಲೇ ಸುರು ಮಾಡಿತ್ತು…

ದೋಡಾ ಆನೆ ಅಲ್ದಾ ಮಗಾ?

ಬೆನ್ನ ಮೇಲೆ ಇತ್ತ ಸಿಮ್ಮಕ್ಕೆ ಸುತ್ತ ಮುತ್ತಾಣ ಮರ, ಗೆಲ್ಲು ಎಲ್ಲಾ ತಾಗುಲೆ ಸುರು ಆತು…

ಹೀಂಗೆಯೇ ಓಡ್ತಾ ಓಡ್ತಾ ಓಡ್ತಾ ಓಡ್ತಾ ಓಡ್ತಾ ಓಡ್ತಾ ಹೊಪಾಗ, ಒಂದು ದೊಡ್ಡ ಗೆಲ್ಲು ತಾಂಟಿ ಸಿಮ್ಮ ಧಡೋಲ್ಲನೆ ಕೆಳ ಬಿದ್ದತ್ತು ಮಗಾ….

ಸಿಮ್ಮಕ್ಕೆ ಸೊಂಟಕ್ಕೆ ಪೆಟ್ಟಾತು…

ಹೆಂಗೋ ಕಾಲೆಳಕ್ಕೊಂಡು ನಡಕ್ಕೊಂಡು, ಹರಕ್ಕೊಂಡು ಮನಗೆ ಎತ್ತಿತ್ತು ಈ ಸಣ್ಣ ಸಿಮ್ಮ…

ಮತ್ತೆ?

ಅದರ ಹೆಂಡತ್ತಿ ಸೊಂಟಕ್ಕೆ ಎಣ್ಣೆ ಕಿಟ್ಟಿತ್ತಡ ಮಗಾ….

ಆತು ಕಥೆ…. ಮುಗ್ತು ಮಗಾ….

ಸರಿ ಅಪ್ಪಾ….. ಇನ್ನೊಂದು ಕತೆ…. ???

ಆಲೋಚನೆ ಮಾಡ್ತೇ….

ಅಪ್ಪಾ…. ???

ಆಲೋಚನೆ ಮಾಡ್ತಾ ಇದ್ದೆ….

ಆ… ಪ್ಪ…… ???

ಹಾ… ಯಾವ ಕಥೆ ಅಕ್ಕು?

ಈಗಾ…… ಚಿರತೆ ಕಥೆ…. ಮತ್ತೆ ಸಿಮ್ಮಂದೆ…

ಓಹ್ ಸರಿ ಮಗಾ….

ದೋಡಾ ಚಿರತೆಯಾ ಸಣ್ಣ ಚಿರತೆಯಾ?

ಹದಾ ಚಿರತೆ…

ಸಿಮ್ಮ?

ದೋಡಾ ಸಿಮ್ಮ….

ಸರಿ ಮಗಾ….

ಹಾಂಗೇ ಸೊಂಟ ಬೇನೆ ಆದ ಸಿಮ್ಮಕ್ಕೆ ಎಣ್ಣೆ ಕಿಟ್ಟುತ್ತಾ ಇಪ್ಪಗಾ…..

ಅಪ್ಪಾ… ಬೇರೆ ಕತೆ ಹೇಳು ಇದಲ್ಲಾ…

ಇದು ಬೇರೆಯೇ ಮಗಾ…

ಆ ಸೊಂಟಕ್ಕೆ ಪೆಟ್ಟಾದ ಸಣ್ಣ ಸಿಮ್ಮದ ಅಣ್ಣ ಇದ್ದನ್ನೇ… ದೋಡಾ ಸಿಮ್ಮ ಇದ್ದನ್ನೇ….

ಅದಕ್ಕೆ ಈ ಸಣ್ಣ ಸಿಮ್ಮದ ಬೇಟೆ ಕತೆ ಕೇಳಿ ಕಂಡಾಬಟ್ಟೆ ಕೋಪ ಬಂತಾಡ ಮಗಾ ಆ ಆನೆ ಮೇಲೆ …

ಅದು ಒಂದಾರಿಯೇ ಎದ್ದು ನಿಂದು ಘ್ರಾ….. ಹೇಳಿ ಅರೆಬ್ಬಾಯಿ ಕೊಟ್ಟತ್ತಡಾ…

ಅರೆಬ್ಬಾಯಿಯಾ???

ಅಲ್ಲ ಮಗಾ ಗರ್ಜನೆ ಮಾಡಿತ್ತಡಾ….

ಅಷ್ಟಪ್ಪಾಗ…

ಅಲ್ಲೇ ಪುದೇಲಿಲಿ ಒಂದು ಹದಾ ಚಿರತೆ ಮನಿಕ್ಕೊಂಡಿತ್ತದಕ್ಕೆ ಸಡನ್ನು ಎಚ್ಚರ ಆಗಿ ಹೆದರಿ ನಡುಗಿ ದಬುಕ್ಕನೆ ಹಾರಿತ್ತಡ ಮಗಾ…

ಅಲ್ಲೇ ಸೈಡಿಲ್ಲಿ ಇತ್ತಿದ್ದ ಒಂದು ಹೊಂಡಕ್ಕೆ ಬಿದ್ದತ್ತಡಾ…

ಆತು ಮಗಾ ಕತೆ ಮುಗ್ತು… ….

ಸರಿ ಅಪ್ಪಾ….

ಗುಡ್ ನೈಟ್…

ಗುಡ್ ನೈಟ್…

ಶ್ರೀಮದ್ರಮಾರಮಣ ಗೋವಿಂದಾ……

ಗೋಓಓಒವಿಂದಾ……

1 COMMENT

LEAVE A REPLY

Please enter your comment!
Please enter your name here