ಮೊನ್ನೆ ಅರ್ಧ ಕೆಜಿ ಬಟಾಣಿ ತಂದದಷ್ಟೇ..
ಅದು ನೆಂಪಿಲ್ಲದ್ದೆ ಕಳುದವಾರ ಪುನಾ ಅರ್ಧ ಕೆಜಿ ಹೊತ್ತೊಂಡು ಬಂದದಾತು…
ಸಹಸ್ರನಾಮಾರ್ಚನೆ, ಕೋಟಿನಾಮಾರ್ಚನೆ, ಅಷ್ಟೋತ್ತರಶತ ನಾಮಾರ್ಚನೆ ಎಲ್ಲಾ ಒಂದೊಂದು ರೌಂಡ್ ಆದ ನಂತ್ರ ಅದು ಕವಾಟಿಂಗೆ ಹೋತು…
ಮೊನ್ನೆ ಆಯಿತ್ಯವಾರ ಹೊತ್ತೊಪಾಗ ಬೊದುಲ್ಲೆ ಹಾಕಿದ್ದು ಎನ್ನ ಹೆಂಡತ್ತಿ…
ನಿನ್ನೆ ಹೊರುದು ಕಡ್ಲೆ ಮಾಡೇಕ್ಕಿತ್ತು…
ಮರತ್ತು…
ಇಂದು ಉದಿಯಾಂದಲೇ ಮಗಂದು ರಿಮೈಂಡರ್ ಬತ್ತಾ ಇತ್ತು…
ಮದ್ಯಾನ ಫೋನ್ ಮಾಡಿ ಕಡ್ಲೆ ಎಷ್ಟೋತ್ತಿಂಗೆ ಹೇಳಿ ಕೇಳಿ ಆತು…
ಬತ್ತೆ ಮಗನೇ.. ಬಂದ ನಂತರ ಮಾಡುವ ಮಗಾ… ಹೇಳಿ ಒಪ್ಪುಸಿ ಆತು…
ಹೊತ್ತೊಪಾಗ ಪುನಾ ಕಾಲ್… ಅಪ್ಪಾ, ನೆಂಪಿದ್ದಲ್ದಾ ?
ಅಂತೂ ಹೊತ್ತೊಪಾಗ ಮನಗೆ ತಲ್ಪಿ ಕಡ್ಲೆ ಪಾತ್ರಗೆ ಕೈ ಹಾಕೆಕ್ಕಾರೆ ಮದಲೇ ಇವ ರೆಡಿ…
ಅಪ್ಪಾ ಕಡ್ಲೆ ಆತಾ???
ಇಲ್ಲೇ ಮಗಾ, ಅದರ ತೊಳೆಯೆಕ್ಕು, ಬೇಶೆಕ್ಕೂ, ಉದ್ದೇಕ್ಕೂ, ಒಣಗ್ಸೆಕ್ಕೂ, ಹೊರಿಯೆಕ್ಕು, ಉಪ್ಪಾಕೆಕ್ಕೂ, ಮೆಣಸಾಕೇಕ್ಕೂ, ಹೊಡಿ ಹಾಕೇಕ್ಕೂ, ನಂತರ ತಿಂಬದು ಮಗಾ…
ಅಂತೂ ಮತ್ತೆ ಹತ್ತು ನಿಮಿಷ ಹೇಂಗೋ ಕಳಾತು…
ಇನ್ನು ತಡೆಯ…
ಅಂಗಿ ನೆಗ್ಗಿ ಎರಡೂ ಕೈಯ ಹೊಟ್ಟೆ ಮೇಲೆ ಮಡಿಕ್ಕೊಂಡು ಸೀದಾ ಅರೆಬ್ಬಾಯಿ ಕೊಟ್ಟೋಂಡು ಬಂದ
ಅಪ್ಪಾ ಎನಗೆ ಹಶು ತಡೆತ್ತಿಲ್ಲೆ, ಅಯ್ಯೋ ಹಶು, ಬೇಗ ಕಡ್ಲೆ ಕೊಡು..
ಎಲಾ ಮಗನೇ…
ಕಡ್ಲೆ ಹಶುವಿಂಗೆ ಇಪ್ಪದಲ್ಲ ಮಗನೇ…
ಕಡ್ಲೆ ಇಪ್ಪದು ಉದಾಸನಪ್ಪಾಗ ತಿಂಬಲೇ…
ಕೂಡ್ಲೆ ಪ್ಲೇಟ್ ಚೇಂಜ್..
ಅಪ್ಪಾ ಅಯ್ಯೋ ಎನಗೆ ಉದಾಸನ ಆವ್ತಾ ಇದ್ದು… ಬೇಗ ಕಡ್ಲೆ ಕೊಡು…
😂😂 kadle sikkithaiku magange !!