ನಮ್ಮಲ್ಲಿ ಗೆಂಡ ಆದವ ಮನೇಲಿ ಅಷ್ಟಾವಧಾನ ಮಾಡುವ ಪಂಡಿತ ಆಗಿಪ್ಪಲೇ ಬೇಕು. ನವಗೆ ಮಂಡೇಲಿ ಸಾವಿರ ಓಡ್ತಾ ಇರ್ತು.
- ಕ್ರಿಕೆಟಿನ ಸ್ಕೋರು
- ಈ ಬೆಶಿ ಬೆಶಿ ರಾಜಕೀಯದ ಹರಟೆ
- ಪಾಕಿಸ್ತಾನಕ್ಕೆ ಬಾಂಬ್ ಹಾಕುವ ವಿಷಯ
- ದಿನಾ ಮೀಯೆಕ್ಕಲ್ಲ ಹಲ್ಲು ತಿಕ್ಕೆಕ್ಕಲ್ಲಾ ಹೇಳಿ ತಲೆಬೆಶಿ
- ಮನೆಗೆ ಬೇಕಾದ ಸಾಮಾನು ತಪ್ಪದು
ಉದಾಹರಣೆಗೆ ಯಜಮಾಂತಿ ಹಸಿಮೆಣಸು ತನ್ನಿ ಹೇಳಿ ಹೇಳುತ್ತು. ಅದು ಎಷ್ಟು ತರೆಕ್ಕು ಹೇಳಿ ಹೇಳುತ್ತಿಲ್ಲೆ. ನವಗೆ ಅದು ಗೊಂತಾಯೆಕ್ಕಾರೆ ದೊಡ್ಡ ಪತ್ತೇದಾರ ಆಯೆಕ್ಕು. ಟೊಮ್ಯಾಟೊ ಆದರೆ ಒಂದು ಕೆಜಿ ಹಸಿಮೆಣಸಿನಕಾಯಿ ಆದರೆ ರಜ್ಜ ಸಾಕು ಹೇಳಿ ಎಲ್ಲಾ ಗೊಂತು ಬೇಕು. ನೆನಪ್ಪು ಮಡುಗೆಕ್ಕು. ಮರೆತ್ತು ಒಂದು ಕೆಜಿ ಹಸಿಮೆಣಸಿನಕಾಯಿ ತೆಕ್ಕೊಂಡು ಹೋದರೆ? ಹೋದರೆ ಕತೆ ಕೈಲಾಸವೇ. ಅವೇ ಹಸಿಮೆಣಸಿನಕಾಯಿ ಹಾಂಗೆ ಖಾರ ಖಾರ ಬೈಗು. ಮೆಲ್ಲಂಗೆ ದೋಸೆ ಹಿಟ್ಟಿಂಗೆ ಮೆಣಸು ಸಣ್ಣಕ್ಕೆ ಕೊರದು ಹಾಕಿ ನಾವು ಗೊತ್ತಾಗದ್ದೆ ಗೊತ್ತಂಪದಾದರೂ ಹೇಂಗೆ ಬೇಕನ್ನೆ. ಬಾಯಿಗೆ ಹಾಕಿದರೆ ಮುಗುತ್ತು ಕತೆ. ಕಣ್ಣು ಸೀದಾ ತಲೆ ಮೇಲೇ.
ಇನ್ನು ಆ ಮನೆ ಸಾಮಾನು ತಪ್ಪ ರಗಳೆ ಆರಿಂಗೆ ಅಕ್ಕು.
ಇದಾ ಮೊನ್ನೆ ಯಜಮಾಂತಿ ಮೆಡಿಮಿಕ್ಸ್ ಸೋಪು ತನ್ನಿ ಹೇಳಿತ್ತು. ಅದರಲ್ಲೂ ತರ ತರ ಇದ್ದು ಹೇಳಿ ಆರಿಂಗೆ ಗೊಂತು. ಹೋದೆ ಅಂಗಡಿಗೆ .ನೋಡ್ರೆ? ನೋಡ್ರೆ ಎಂತ? ಸ್ಯಾಂಡಲ್, ಅಲೋವೆರಾ ,ಮತ್ತೆಂತ ಬೂದಿ ಹೀಂಗೆ. ಎನಗೆ ರಪಕ್ಕ ನೆನಪಾತು. ಅರಸಿನ ಚಂದನ ಗುಣ ಹೊಂದಿರುವ ಸಂತೂರ್ ಸಂತೂರ್ ಪದ್ಯ. ಹಾಂಗಾರೆ ಅದರ ತಂದರಾತು. ಹೇಳಿ ತೆಕ್ಕೊಂಡು ಹೋದೆ. ಇಂದು ಎನ್ನ ಹೊಗಳುಗು ಹೇಳಿ.ಯಜಮಾಂತಿ ಒಂದಾರಿ ಸೋಪಿನ ಜೆರಳೆ ನೋಡುವಾಂಗೆ ನೋಡಿತ್ತು. ಆನು ಹೇಳಿತ್ತು ಎಂತರಾ? ಕೇಳಿತ್ತು. ಉಮ್ಮಾ ಆರಿಂಗೆ ಗೊಂತು?
ಮತ್ತೆ ಹೋಗಿ ನಾರ್ಮಲ್ ತಂದೆ.
ಈ ಚಂದನ ವಾಸನೆ ಕಂಡ್ರಾವುತ್ತಿಲ್ಲೆ ಎನಗೆ ಆದರೆ ಒಂದು ತಿಂಗಳು ಆನೇ ಅದರ ಹಾಕೆಕ್ಕಾಗಿ ಬಂತು. ಎನ್ನ ಕಂಡರೆ ಎನಗೇ ವಾಸನೆ ಬಪ್ಪಲೆ ಸುರುವಾತು. ಪುನುಗು ಪುಚ್ಚೆಯ ಹಾಂಗೆ ಘಮ ಘಮ ಓಡಾಡಿಗೊಂಡು ಇತ್ತೆ ಮನೆಯಿಡೀ.
ಈ ಅವಧಾನ ನಡವಗ ಒಂದು ಜನ ಟಾಂಯ್ ಟಾಂಯ್ ಹೇಳಿ ಗಂಟೆ ಬಡಿವಲೆ ಇರ್ತವು. ನಡೂಕೆ ಅವಧಾನಿಗಳ ಹತ್ರೆ ಕೇಳುವಾಗ ಎಷ್ಟು ಸರ್ತಿ ಬಡುದಾ ಹೇಳೆಕ್ಕು ಅವು.
ಮನೇಲು ಹಾಂಗೆ ಇದಾ ಕುಕ್ಕರ್ ಮಡುಗಿದ್ದೆ ಐದೋ ಆರೋ ವಿಸಿಲ್ ಹೊಡದಪ್ಪಗ ಆಫ್ ಮಾಡಿ ಹೇಳಿ ಯಜಮಾಂತಿ ಹೇಳಿರ್ತು.
ನವಗೆ ಮೊದಲಾಣ ಕನ್ಫ್ಯೂಷನ್ ಐದೋ ? ಆರೋ?
ಅದು ಮೂರು ಹೊಡವಗ ಮರತ್ತು ಹೋವುತ್ತು.
ಜಗತ್ತಿನ ಎಲ್ಲಾ ಮಂಡೆಬೆಶಿ ಇಪ್ಪಗ ಈ ಕುಕ್ಕರ್ ವಿಸಿಲ್ ಲೆಕ್ಕ ಆರಿಂಗೆ ನೆನಪ್ಪಿರ್ತು ಭಾವೋ?
ಅದಾ.. ಆರೋ ಓಡಿ ಹೋಗಿ ಕುಕ್ಕರ್ ಬಂದ್ ಮಾಡುವಾಗ ನವಗೆ ಓಹ್ ಇದು ಮಾಡೆಕ್ಕಾತಲ್ಲ ಹೇಳಿ ನೆಂಪು ಅಪ್ಪದು. ಆದರೆ ಅಂಬಗ ಅಡುಗೆ ಮನೇಲಿ ದಡಬಡ ಪಾತ್ರೆ ಉರುಳುವ ಶಬ್ದ ಕೇಳಿ ಇಂದು ಎನಗೆ ಗೋವಿಂದ ನಿನ್ನ ಪಾದಾರವಿಂದ ನೆಂಪಾವುತ್ತು.ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲ ಇಲ್ಲ!
ಇನ್ನೊಂದು ವಿಷಯಕ್ಕೆ ಅಮ್ಮಂದ್ರು ನವಗೆ ಟ್ರೈನಿಂಗ್ ಕೊಟ್ಟಿರ್ತವು.ಉದ್ದುವಾಗ ನಡವಲಾಗ ಹೇಳಿ. ನವಗೆ ಹಿಡಿಸೂಡಿಲಿ ಎರಡು ಬಿದ್ದರೂ ಅದು ಕಲಿತ್ತಿಲ್ಲೆ. ಮದುವೆಯಾಗಲಿ ನೋಡಾ.. ಒಂದೇ ಒಂದು ಸರ್ತಿ ಯಜಮಾಂತಿ ” ಇದಾ ನಡೆಯೆಡಿ” ಹೇಳಿದರೆ ಸಾಕು. ನಾವು ಆ ಉದ್ದುವ ಸಮಯಲ್ಲಿ ನೆಲಂದ ಎರಡು ಅಡಿ ಮೇಲೆ ಹಾರೂಲು ರೆಡಿ!
ಇದೆಲ್ಲ ಸುಮ್ಮನೆ ಆತೋ ಹಾಂಗೆಂತ ಇಲ್ಲೆ. ಇದೆಲ್ಲ ನಿಜ ಹೇಳ್ರೆ ಅದಕ್ಕೂ ಶಿಕ್ಷೆ ನಾವೇ ಅಲ್ಲದ ಅನುಭವಿಸೆಕ್ಕಾದ್ದು!