ಗುರಿಯೇ ಗೆರೆಯಾ?!

life goals

ನವಗೆಲ್ಲ ಸಣ್ಣಾದಿಪ್ಪಗಂದಲೇ ಜೀವನಲ್ಲಿ ಒಂದು ಗುರಿ ಇರಕ್ಕು ಹೇಳಿ ದೊಡ್ಡವು ಹೇಳಿದ ಪಾಠ. ಇದೇ ವಿಷಯದ ಬಗ್ಗೆ ಆನು ಒಂದರಿ ಕೂದು ಯೋಚನೆ ಮಾಡಿದೆ. ಗುರಿ ಇಲ್ಲದ್ದೆ ಇಪ್ಪದು ಹೇಳಿದರೆ ಅಂಬಗ ಅಂವ ಜೀವನಲ್ಲಿ ಎಂಥ ಸಾಧನೆ ಮಾಡ್ಲೆ ಪ್ರಯತ್ನ ಮಾಡ್ತ ಇಲ್ಲೆ ಹೇಳಿ ಅರ್ಥವಾ? ಅಥವಾ ಅಂವನ ಸಾಧನೆಗೆ ಮಿತಿ ಇಲ್ಲೆ ಹೇಳಿಯಾ?

ಆನು ಇಂತಹ ಒಂದು ಡಿಗ್ರಿ ತೆಕ್ಕೊಂಬದು ಅಥವಾ ಇಂತಹ ಕೆಲಸ, ಉದ್ಯೋಗ ಹಿಡಿವದು ಇಂಥವೆಲ್ಲ ನಮ್ಮಲ್ಲಿ ಹೆಚ್ಚಿನವಕ್ಕೆ ಇಪ್ಪಂಥ ಗುರಿಗ. ಹಾಂಗಾರೆ ಅವನ ಸಾಧನೆ ಆ ಗುರಿ ಮುಟ್ಟಿದ ಕೂಡಲೇ ನಿಲ್ಲುತ್ತಾ? ಹಾಂಗಾರೆ ಗುರಿ ಹೇಳಿದು ಒಂದು ರೀತಿಲಿ ನಮಗೆ ನಾವೇ ಹಾಕಿಕೊಂಬ ಒಂದು ಗೆರೆ ಅಲ್ಲದ? ಇಂಥದೊಂದು ಆಯೆಕ್ಕು, ಆದ ಕೂಡಲೇ ಎನ್ನ ಗುರಿ ತಲುಪಿದೆ ಹೇಳಿ ಅಲ್ಲಿಗೆ ಮುಗಿತ್ತಾ!? ಖಂಡಿತ ಇಲ್ಲೆ. ಅಲ್ಲಿಂದ ಮತ್ತೆ ನಿಜವಾದ ಜೀವನ ಪ್ರಯಾಣ ಸುರು ಅಪ್ಪದು.

life goals

ಹಾಂಗಾದರೆ ನಾವು ಸಣ್ಣಾದಿಪ್ಪಗ ಹಾಕಿಕೊಂಬ ಗುರಿ, ಯಾವುದೋ ದೊಡ್ಡ ಜೀವನ ಪ್ರಯಾಣದ ಆದಿ ಹೇಳುದು ಎನ್ನ ಅಭಿಪ್ರಾಯ. ಯಾವತ್ತೂ ಒಂದು ಗುರಿ ಹಾಕಿಕೊಂಡು ಅದು ಮುಗಿದಪ್ಪಗ ಸುಮ್ಮನೆ ಕೂದುಬಿಟ್ಟರೆ ಅಲ್ಲಿಗೆ ನಮ್ಮ ಬೆಳವಣಿಗೆ ನಿಲ್ಲುತ್ತು. ನಾವು ಒಂದು ಗ್ರೇಶಿದ ಡಿಗ್ರಿ ಸಿಕ್ಕಿಅಪ್ಪಗಳೋ, ಕೆಲಸ ಸಿಕ್ಕಿಅಪ್ಪಗಳೋ ಅಥವಾ ಒಂದು ನಮ್ಮದೇ ಸ್ವಂತ ಮನೆ ಕಟ್ಟಿಸಿ ಅಪ್ಪಗಳೋ ನನ್ನ ಗುರಿ ತಲುಪಿದೆ ಹೇಳಿ ಮುಂದೆ ಎಂತ ಮಾಡದ್ದೆ ಕೇವಲ ಅಲ್ಲಿಯೇ ಅದೇ ಮಟ್ಟಲ್ಲಿ ಮುಂದುವರಿದು ಬಿಟ್ಟರೆ ನಮ್ಮ ಬೆಳವಣಿಗೆ, ಪ್ರೌಢತೆ ಅಲ್ಲಿಯೇ ಅದೇ ಮಟ್ಟಲ್ಲಿ ಉಳಿದುಬಿಡ್ತು.

ಯಾವತ್ತೂ ನಮ್ಮ ಗುರಿ ನಮ್ಮ ಬೆಳವಣಿಗೆಗೆ ಹಾಕಿದ ಗೆರೆಯ ಹಂಗೆ ಅಪ್ಪಲಾಗ, ನಮಗೆ ನಾವು ಹಾಕಿಕೊಂಬ ಮಿತಿ ಅಪ್ಪಲಾಗ. ಅಲ್ಲಿಂದ ಮುಂದೆ ಮತ್ತುದೆ ಹೋಗಿ ನಾವು ಈಗ ಇಪ್ಪ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಹೋಪದೇ ನಮ್ಮ ಮತ್ತಾಣ ಗುರಿ ಆವ್ತಾ ಹೋದರೆ ನಮ್ಮ ಬೆಳವಣಿಗೆಗೆ ಮಿತಿ ಇರ್ತಿಲ್ಲೆ. ಹಾಂಗಾದರೆ ಇದು ಒಂದು ರೀತಿ ತೃಪ್ತಿಯಿಲ್ಲದ ಜೀವನದ ಹಾಂಗಾತಿಲ್ಲೆಯಾ ಹೇಳುವ ಪ್ರಶ್ನೆ ಬಕ್ಕು. ಅದು ನಾವು ಬೆಳವಣಿಗೆ ಹೇಳಿ ಯಾವುದರ ಪರಿಗಣಿಸುತ್ತು ಹೇಳುದರ ಮೇಲೆ ನಿರ್ಧಾರ ಆವುತ್ತು.

ಜೀವನ ಪಾಠ ಕಲಿತ್ತಾ ಹೋಪದು, ಆದಷ್ಟು ಸ್ವತಂತ್ರರಾವ್ತಾ ಹೋಪದು, ಕೊಟ್ಟರು ಖರ್ಚಾಗದ್ದೇ ಇಪ್ಪಂಥ ಸಂಪತ್ತಿನ ಸಂಪಾದನೆ ಮಾಡುದು ( ಜ್ಞಾನ) ಇಂಥವು ನಮ್ಮ ಬೆಳವಣಿಗೆ ಹೇಳಿ ನಾವು ಪರಿಗಣಿಸಿದರೆ ಅಲ್ಲಿ ಅತೃಪ್ತಿ ಹೇಳುವ ಪ್ರಶ್ನೆ ಬತ್ತಿಲ್ಲೆ. ಅದು ಬಿಟ್ಟು ಕೇವಲ ತೀರಾ ಭೌತಿಕವಾಗಿ ನಮ್ಮ ಬೆಳವಣಿಗೆಯ ಸೀಮಿತಗೊಳಿಸಿದ ಕೂಡ್ಲೆ ಅಲ್ಲಿ ಅತೃಪ್ತಿ ಬಂದು ಅದುವೇ ನಮ್ಮ ನೆಮ್ಮದಿಗೆ ಕುಂದು ಮಾಡುವ ಸಂದರ್ಭವೇ ಜಾಸ್ತಿ ಆವ್ತು.

ಹಾಂಗಾಗಿ ನಮ್ಮ ಗುರಿಯೇ ನಮಗೆ ನಾವು ಹಾಕಿಕೊಂಬ ಗೆರೆ ಅಥವಾ ಮಿತಿ ಅಪ್ಪಲಾಗ ಹೇಳಿದರೆ ಹೇಂಗಿಪ್ಪ ಗುರಿ, ಯಾವ ಸಮಯಲ್ಲಿ ನಾವು ಮಾಡಿಕೊಳ್ತು, ನಾವು ಗುರಿ ಹೇಳಿ ಯಾವುದರ ಪರಿಗಣಿಸುತ್ತಾ ಹೋವ್ತು ಹೇಳುದರಲ್ಲಿ ನಾವು ಜಾಗೃತೆ ಮಾಡೆಕ್ಕು.

LEAVE A REPLY

Please enter your comment!
Please enter your name here