ಇಂದ್ರಾಣ ಹುಳಿ ಮೇಲಾರ ಪಷ್ಟ್ಲಾಸಾಯಿದು ಭಾವಾ…
ಕೊದಿಲಂತೂ ಸೂಪ್ಪರ್….
ಸಾರು ಊಚು…
ತಾಳುಗೋ ಕೇಳುದೆ ಬೇಡ…
ಆರು ಭಾವಾ ಇಂದು ಅಡಿಗ್ಗೆ???
ಉಂಡಿಕ್ಕಿ ಎದ್ದ ನೆಂಟ್ರಿಷ್ಟ್ರುಗೋ ಆಹಾ ಓಹೋ ಹೇಳ್ತಾ ಕೈ ನಕ್ಕಿಗೊಂಡು ನಕ್ಕಿಗೊಂಡು ತೊಳವಲೆ ಹೆರಟವು…
ಇತ್ಲಾಗಿ ಅಡಿಗೆ ಸತ್ಯಣ್ಣಂಗೆ ಸೂತಕ ಹೇಳಿ ಬದಲಿಂಗೇ ಬಂದ ಹೊಸಾ ಭಾವ ಚೀಲದ ಒಳ ಅಡೀಲಿ ಮಡಗಿದ ಬೆಳೀ ಹೊಡಿ ಪೇಕೆಟಿನ ಮುಟ್ಟಿ ನೋಡಿಗೊಂಡ…
ಇನ್ನೊಂದು ಹತ್ತು ಜೆಂಬ್ರದ ಅಡಿಗೆ ಖಾಯಂ ಹೇಳಿ ಒಂದು ಸಣ್ಣ ನೆಗೆ ಸುಳುದತ್ತು ಮೀಸೆ ಕೊಡೀಲಿ…
MSG #ಮೋನೋಸೋಡಿಯಂಗ್ಲುಟಮೇಟ್ #ಅಜಿನಮೋಟೋ #ಟೇಸ್ಟ್_ಮೇಕರ್ ಎಲ್ಲಾ ಒಂದೇ… ಇದರ ರೋಡ್ ಸೈಡಿನ ಗಾಡಿ ಅಂಗಡಿ ತಿಂಡಿಗಳಲ್ಲಿ, ಫ್ರೈಡ್ ರೈಸ್ ಗೋಬಿ ಮಂಚೂರಿಗೊಕ್ಕೆ ಹಾಕುತ್ತವು. ಸಣ್ಣ ಸಣ್ಣ ಕಡ್ಡಿ ಕಡ್ಡಿ ನಮೂನೆಯ ಉಪ್ಪು/ಶೆಕ್ಕರೆಯ ಹಾಂಗೇ ಕಾಣ್ತ ಬೆಳಿ ಹೊಡಿ. ಕಂಡಾಬಟ್ಟೆ ಬಾಯಿರುಚಿ ಮಾಡ್ಸುತ್ತು. ಇತ್ತೀಚೆಗೆ ಆರೋ ಕೆಲಾವು ಅಡಿಗೆ ಬಟ್ಟಕ್ಕ ಜೆಂಬ್ರದ ಅಡಿಗ್ಗೂ ಹಾಕುತ್ತವು ಹೇಳಿ ಕೆಲಾವು ಜೆನ ಹೇಳಿದವು.
ಜಾಗ್ರತೆ ಭಾವಂದ್ರೆ… ಅದು #ಕ್ಯಾನ್ಸರ್ ಕಾರಕ