ದೇಶ ಸುತ್ತಿ ನೋಡು , ಕೋಶ ಓದಿ ನೋಡು ಹೇಳ್ವ ಗಾದೆ ನವಗೆಲ್ಲರಿಂಗು ಗೊಂತಿದ್ದು. ಎನಗೆ ಕೋಶ ಓದುಲೆ ರಜ ಉದಾಸಿನ ಆದರುದೇ ದೇಶ ಸುತ್ತುದು ಹೇಳ್ರೆ ಭಾರಿ ಇಷ್ಟ. ಹಾಂಗೆ ಎನ್ನ ಅಪ್ಪ , ಅಪ್ಪಚ್ಚಿ , ಎರಡು ಮಾವಂದ್ರು ಸೇರಿ ಕಾರ್ ಲಿ ಒಂದು ರೋಡ್ ಟ್ರಿಪ್ ಹೋದರೆಂಗೇಳಿ ಪ್ಲಾನ್ ಮಾಡಿದವು. ಹಾಂಗೆ ಪ್ಲಾನ್ ಆದ್ದು ಕನ್ಯಾಕುಮಾರಿಂದ ಕಾಶ್ಮೀರ ಕ್ಕೆ ಹೋಪದೂಳಿ ಅವರ ಪ್ಲಾನ್ ಲಿ ಆನು ಇಲ್ಲದ್ರು ಕಡೇಂಗೆ ಹೇಂಗಾರು ಸೇರ್ಸಿಗೊಂಡವು ಎನ್ನ.
K2K – ಕನ್ಯಾಕುಮಾರಿಂದ ಕಾಶ್ಮೀರ

ಹಾಂಗೆ ಅಕ್ಟೋಬರ್ 13 2018 , ಮಂತ್ರಾಕ್ಷತೆ ಹಾಕಿ ಗುರುಗಳ ನೆನಪಿಸಿಗೊಂಡು ಉದಿಯಪ್ಪಗ 4:30 ಗೆ ಮಂಜಿನ ನಗರಿ ಮಡಿಕೇರಿ ಇಂದ ಹೆರಟೆಯ. ಒಳ್ಳೆ ಚಳಿ , ದಾರಿ ಇಡೀ ಮಂಜು , ಎಲ್ಲರ ಮನಸ್ಸಿಲಿ ಒಂದು ಖುಷಿ ,ಎಲ್ಲ್ಯೊ ಚೂರು ಹೆದರಿಕೆ!!. ಮೈಸೂರಿಲಿ ಉದಿಯಪ್ಪಗಣ ತಿಂಡಿ ಕಾಪಿ ಕುಡುದಿಕ್ಕಿ ಮುಂದೆ ಹೋದೆಯ. ಸತ್ಯಮಂಗಲ ಘಾಟಿಲಿ ಒಂದು ಲೋರಿ ಉರುಳಿ ಬಿದ್ದು ಟ್ರಾಫಿಕ್ ಜಾಮ್ ಆಗಿ 4 ಗಂಟೆ ಘಾಟಿಲಿ ಹಾಳಾದ ಕಾರಣ ಸುರುವಾಣ ದಿನ ಎಂಗಳ ಪ್ಲಾನ್ ಚೂರು ತಟಪಟ ಆತು. ಹೊತ್ತೋಪಾಗ 4ರ ಹಾಂಗೆ ಮಧುರೈ ಮೀನಾಕ್ಷಿ ದೇವಸ್ಥಾನಲ್ಲಿ ದೇವಿಯ ದರ್ಶನ ಮಾಡಿ ಎಂಗಳ ಸುರುವಾಣ destination ಆದ ಕನ್ಯಾಕುಮಾರಿಗೆ ಇರುಳು 10:30 ಗೆ ಎತ್ತಿ ವರಗಿದೆಯ.
ಉದಿಯಪ್ಪಗ ಕನ್ಯಾಕುಮಾರಿ ದೇವಿಯ ದರ್ಶನ ಮುಗಿಶಿ , ತಿರುವಳ್ಳುವರ್ ಪ್ರತಿಮೆ , ವಿವೇಕಾನಂದ ರಾಕ್ ಮೆಮೋರಿಯಲ್ ನೋಡಿ , ತಿರುವನಂತಪುರಂ ಇಂದ ಸೀದಾ ಮಂಗಳೂರಿಂಗೆ ನಡು ಇರುಳು ತಲುಪಿದೆಯಾ .

ಮಡಿಕೇರಿಂದ ಮಂಗಳೂರಿಂಗೆ ಬಪ್ಪಲೆ ಇಷ್ಟೆಲ್ಲಾ ಕಷ್ಟ ಪಡೆಕ್ಕಿತ್ತಾಳಿ ನೆಗೆ ಮಾಡಿಯೊಂಡು ಮರು ದಿನ ಹೆರಟದು ಪುಣೆಗೆ. ಗಣೇಶ ಮಾವಂಗೆ ಎಲ್ಲಿಂದ ಸ್ಪಿರಿಟ್ ಬಂದದು ಗೊಂತಿಲ್ಲೆ. ಪುಣೆ ಲಿ ನಿಲ್ಲೆಕ್ಕಾದ ಆ ದಿನದ ಟ್ರಿಪ್ ಕಡೆೇಂಗೆ ನಿಂದದು Bombay ಪೇಟೆ ಕಳುದು ಯಾವುದೋ ಒಂದು ಊರಿಲಿ. 1000 km ಒಂದೇ stretch ಲಿ!!
ಎಂಗ ಕೇರಳ , ಮಹಾರಾಷ್ಟ್ರ ಎಲ್ಲ ಮೊದಲೇ ನೋಡಿತ್ತ ಜಾಗೆಗೊ ಆದ ಕಾರಣ ಎಲ್ಲಿಯೂ ನಿಲ್ಸದ್ದೆ ಮುಂದೆ ಸಾಗಿದೆಯ. ಮರುದಿನ ಎದ್ದು ಕಾಪಿಗೆ ಮಹಾರಾಷ್ಟ್ರ ಸ್ಪೆಷಲ್ ಪಾವ್ ಭಾಜಿ ತಿಂದು ಗುಜರಾತಿಂಗೆ ಹೆರಟೆಯ. ದಾರಿಲಿ Diu Daman ಸುತ್ತಿ , ನರ್ಮದಾ ನದಿಯ ನೋಡಿಗೊಂಡು ದಾರಿ ಉದ್ದಕ್ಕೂ ಖುಷಿಲಿ ಮೇಯ್ತಾ ಇದ್ದ ದೇಸಿ ಗೋವುಗಳ ನೋಡಿಗೊಂಡು ಅಹಮದಾಬಾದಿಲಿ ಇರುಳಾಣ ಊಟ ಗುಜರಾತಿ ಸ್ಪೆಷಲ್ ಧೋಕ್ಲಾ , ಜಲೇಬಿ , ಫಾಫ್ದ , ತೆಪ್ಲಾ ಎಲ್ಲ ತಿಂದು ರಾಜಸ್ಥಾನ್ ಬಾರ್ಡರ್ ದಾಂಟಿ ಉದೈಪುರ್ – ಲೇಕ್ ಸಿಟಿಲಿ ಉಳುಕ್ಕೊಂಡೆಯ. ಉದೈಪುರ್ ಲಿ ಸಿಟಿ ಪ್ಯಾಲೇಸ್ , ಲೇಕ್ ಪ್ಯಾಲೇಸ್ , ಜಗದೀಶ ಮಂದಿರ ,ಲೇಕ್ ಪಿಚೋಲಾ ಎಲ್ಲ ನೋಡಿಗೊಂಡು ಖುಷಿ ಪಟ್ಟೆಯಾ.
ಇಲ್ಲಿಂದ ಮುಂದಾಣ ಪಯಣ ಜೋದ್ಪುರಿಂಗೆ. ಜೋದ್ಪುರ್ ಲಿ ಮೆಹ್ರಾನಘಡ್ ಹೇಳ್ವ ಭಾರಿ ಚೆಂದದ ಅರಮನೆ , ಕೋಟೆ ನೋಡಿ ಮರುದಿನ ಪಂಜಾಬ್ ನ ಅಮೃತಸರ್ ನ ಜಲಿಯನ್ವಾಲ ಭಾಗ್ ನೋಡಿ ಸಮಾಜ ವಿಜ್ಞಾನಲಿ ಕಲ್ತ ಜಾಗೆಯ ಅಂತೂ ಇಂತೂ ನೋಡಿತನ್ನೇಳಿ ಸಂತೋಷ ಪಟ್ಟುಗೊಂಡು ಅಲ್ಲಿಯೇ 20 km ದೂರಲ್ಲಿ ಇಪ್ಪ ವಾಘಾ ಬಾರ್ಡರ್ / ಲಾಲ್ ಚೌಕ್ / ಅತ್ತರಿ ಬಾರ್ಡರ್ ಲಿ BSF ಯೋಧರ marchpast ನೋಡಿ ಮೈ ಎಲ್ಲ ಝಂಮ್ ಹೇಳಿತು. ಅವ್ವು ಕಾಲಿನ ತಲೆವರೆಗೆ ಎತ್ತಿ ಡಬ್ಬನೇ ಕೆಳ ಹಾಕ್ವ ಆ ರಭಸ , ಶತ್ರು ದೇಶ ಪಾಕಿಸ್ತಾನದವರ ಕಣ್ಣಿಲೇ ಕೊಲ್ಲುವ ಹಾಂಗೆ ನೋಡುವ ರೀತಿ, ಅವರ ಎದುರು “ವಂದೇ ಮಾತರಂ , ಬೋಲೋ ಭಾರತ್ ಮಾತಾ ಕಿ ಜೈ “ – ಹೇಳ್ವಾಗ ಆದ ಆ ರೋಮಾಂಚನ ಯಾವತ್ತೂ ಮರವಲೆ ಸಾಧ್ಯ ಇಲ್ಲೆ.
ಇಲ್ಲಿಂದ ಮತ್ತೆ ಅಮೃತಸರ್ ನ ಗೋಲ್ಡನ್ ಟೆಂಪಲಿಂಗೆ ಹೋಗಿ ಲಂಘರ್ – ಹೇಳ್ರೆ ಭೋಜನ ಪ್ರಸಾದ ಮುಗಿಶಿ ಪಠಾನ್ಕೋಟ್ ಹೇಳ್ತ ಜಾಗೆಗೆ ಎತ್ತಿದೆಯ. ಎಲ್ಲೋರು ನಾಳೆಯಾಣ ದಿನ ಕಾಶ್ಮೀರಕ್ಕೆ ಹೋಪದು ಹೇಳ್ವ excitement ಲಿ ನಿದ್ರಾ ದೇವಿಗೆ ಶರಣಾದೆಯ.

ಉದಿಯಪ್ಪಗ ಎದ್ದು ಕಾಶ್ಮೀರಕ್ಕೆ ಪಯಣ ಸುರು ಮಾಡಿದೆಯಾ. ಎಂಗಳ ಟ್ರಿಪ್ ನ ಫೈನಲ್ destination- ಕಾಶ್ಮೀರ. ಒಂದು ಸಣ್ಣ ಊರು ಮಡಿಕೇರಿಂದ ಹೆರಟು ಭಾರತದ ಕಿರೀಟಕ್ಕೆ ಹೋವ್ತ ಇದ್ದೆಯಾ ಹೇಳ್ತ ಹೆಮ್ಮೆ !! ಮಧ್ಯಾಹ್ನವೇ ಎತ್ತೆಕ್ಕಾದ ಎಂಗ ಘಾಟಿಲಿ ಆ ದಿನ ಗುಡ್ಡೆ ಜರುದು ಬಿದ್ದು 13 ಘಂಟೆ ಅಂತೇ ದಾರಿಲಿ ಇರೆಕ್ಕಾಗಿ ಬಂತು. ಆ ಚಳಿಲಿ Border roads organisation- BRO ನ ಸಿಬ್ಬಂದಿಗ ಬಂದು ಎಷ್ಟಾವ್ತೋ ಅಷ್ಟು ಬೇಗ ದಾರಿ ಕ್ಲಿಯರ್ ಮಾಡಿ ಕೊಟ್ಟಿದವು. ನಿಜವಾಗಿಯೂ Border Roads Organisation ಗೆ ಒಂದು ಸಲಾಂ. ನಡು ಇರುಳು ಕಾಶ್ಮೀರದ ಶ್ರೀನಗರಕ್ಕೆ ತಲುಪಿಯಪ್ಪಗ ಆರ್ಮಿ ಅವ್ವು ನಿಲ್ಸಿ ವಿಚಾರ್ಸಿದವು. ಎಂಗಳ ಕಾರ್ ನ ನಂಬರ್ ನೋಡಿ ಒಬ್ಬ ಕನ್ನಡಿಗ ಬಂದು – ಸಾರ್ ಕರ್ನಾಟಕ ದಿಂದ ಕಾರ್ ಅಲ್ಲಿ ಬಂದ್ರಾ ? ನಾನು ಮಂಡ್ಯದವನೂಳಿ ಹೇಳ್ಯಪ್ಪಗ ಆದ ಖುಷಿಯೇ ಬೇರೆ.
ಶ್ರೀನಗರಲಿ ಕಾರ್ಗಿಲ್ 200 km ಹೇಳ್ತ ಬೋರ್ಡ್ ನ ಕಂಡಪ್ಪಗ ನಾಳೆ ಕಾರ್ಗಿಲಿಂಗೆ ಹೋದರೆಂತಾಳಿ ಮರುದಿನ ಎದ್ದು ಕಾರ್ಗಿಲಿಂಗೆ ಸೋನ್ಮಾರ್ಗ , ಡ್ರಾಸ್ ಮೂಲಕ ಹೋದೆಯ. ಕಾರ್ಗಿಲ್ ಲಿ -3 ಡಿಗ್ರಿ . ಆ ಚಳಿಲಿ ಕಟಕಟ ಹೇಳಿ ನಡುಗಿಗೊಂಡು ಇತ್ತೆ ಆನು. ಹಾಂಗಿಪ್ಪ ಕೊರೆತ ಚಳಿಲಿ ಯುದ್ಧ ಮಾಡಿದ ಸೈನಿಕರು ಮಹಾತ್ಮರು !! ನಮ್ಮ ಸೈನಿಕರು ಪಾಪಿ ಪಾಕಿಸ್ತಾನಿಗಳ ವಿರುದ್ಧ ಯುದ್ಧ ಗೆದ್ದ ಕಥೆಯ ಅಲ್ಲಿಯೇ ಇದ್ದ ಸೈನಿಕರ ಬಾಯಿಂದ ಕೇಳಿ – ದೇಶಕ್ಕೆ ಪ್ರಾಣ ಅರ್ಪಿಸಿದ ಸೈನಿಕರಿಂಗೆ ನಮಸ್ಕಾರ ಮಾಡಿ ವಾಪಸ್ ಶ್ರೀನಗರಕ್ಕೆ ಬಂದು ವರಗಿದೆಯ.
ಶ್ರೀನಗರಲ್ಲಿ Dal lake , ಒಂಚೂರು shopping ಮಾಡ್ಲೆ ಅಷ್ಟೇ ಆದ್ದು. ಎಂತಕೆ ಹೇಳ್ರೆ ಆ ದಿನ ಕಾಶ್ಮೀರಲ್ಲಿ ಟೆರರಿಸ್ಟ್ ಅಟ್ಯಾಕ್ ಆಗಿ ಸೆಕ್ಷನ್ ಹಾಕಿತಿದವ್. ಊರಿಲಿ ಎಲ್ಲರಿಂಗೂ ಎಂಗಳದ್ದೇ ಚಿಂತೆ !! ಒಂದು ಬಾಂಬ್ / ಗನ್ shot ಹೊಟ್ಟಿದ್ದು ಎಂಗೊಗೆ ಕೇಳಿದ್ದು. ಹಾಂಗೆ ಆದಷ್ಟು ಬೇಗ ಕಾಶ್ಮೀರಂದ ಹೆರಡೆಕ್ಕು ಹೇಳಿ ಹೆಚ್ಚು ತಿರಗಾಟ ಮಾಡದ್ದೆ , ಬೇಗ ಹೆರಟು, ಹರ್ಯಾಣಲ್ಲಿ ಕುರುಕ್ಷೇತ್ರಕ್ಕೆ ಭೇಟಿ ಕೊಟ್ಟು ಅಲ್ಲ್ಯಾಣ ಭೀಮ ಸರೋವರ ನೋಡಿಗೊಂಡು , ಶ್ರೀಕೃಷ್ಣ ಜನ್ಮ ಭೂಮಿ ಮಥುರಲ್ಲಿ ಶ್ರೀಕೃಷ್ಣ ನ ದರ್ಶನ ಮಾಡಿ , ತಾಜ್ ಮಹಲ್ ಲಿ ಬೇಕಾದಷ್ಟು ಫೋಟೋ ತೆಗೆಷ್ಯೊಂಡು , ಮಹಾರಾಷ್ಟ್ರದ ನಾಗ್ಪುರಲ್ಲಿ ಆರೆಸ್ಸೆಸ್ ಮುಖ್ಯ ಕಾರ್ಯಾಲಯಕ್ಕೆ ಭೇಟಿ ಕೊಟ್ಟು ಸೀದಾ 500km ದೂರದ ಹೈದರಾಬಾದಿಲಿ ಉಳುಕ್ಕೊಂಡೆಯ.
14 ದಿನಂದ ಬರೇ ರೋಟಿ , ನಾನ್ , ತಿಂದು ತಿಂದು ಒಂದರಿ ಮನೆಗೆ ಹೋಗಿ ಹೆಜ್ಜೆ ಉಪ್ಪಿನಕಾಯಿ ಉಂಡರೆ ಸಾಕಪ್ಪ ಹೇಳ್ವ ಮಟ್ಟಕ್ಕೆ ಬಂದಿತ್ತೆಯ. ಮರು ದಿನ ಹೇಳ್ರೆ – ಅಕ್ಟೋಬರ್ 28 , ಎಂಗಳ ಟ್ರಿಪ್ ನ ಕಡೇ ದಿನ ಹೈದರಾಬಾದಿಂದ ಬೆಂಗಳೂರು. ಬೆಂಗಳೂರು ತಲಪಿಯಪ್ಪಗಳೇ ಮನಸ್ಸಿಲಿ ನಮ್ಮ ಊರು ಬಂತು ಹೇಳ್ವ ಖುಷಿ , ಅಯ್ಯೋ K2K ಮುಗುತ್ತಾ ಹೇಳಿ ದುಃಖ ,ಕನ್ಯಾಕುಮಾರಿಂದ ಕಾಶ್ಮೀರಕ್ಕೆ ಹೋಗಿ ಬಂದ ಸಾಧನೆ ,ಎಲ್ಲವನ್ನು ಮೆಲುಕು ಹಾಕುತ್ತ ಬೆಂಗಳೂರಿಂದ ಮಡಿಕೇರಿಗೆ ತಲುಪಿದೆಯ.
ಈ ಇಡೀ ರೋಡ್ ಟ್ರಿಪ್ ಆದ ಮೇಲೆ कन्याकुमारी से कश्मीर तक भारत एक है ಹೇಳುದು ಎಷ್ಟು ಸತ್ಯ ಹೇಳಿ ಗೊಂತಾತು .
ಹಾಂಗೆ 14 ದಿನಲ್ಲಿ 14 ರಾಜ್ಯ , 4 ಕೇಂದ್ರಾಡಳಿತ ಪ್ರದೇಶ – ಒಟ್ಟು 9,033 km ಪ್ರಯಾಣ ಮಾಡಿದ ಹೆಮ್ಮೆ !!
14 ದಿನಲ್ಲಿ ಬೇರೆ ಬೇರೆ ರೀತಿಯ ಜನಂಗ..ಅವರ ಆಚಾರ ವಿಚಾರ ಊಟ ತಿಂಡಿ ಎಲ್ಲ ಹತ್ತರಂದ ನೋಡ್ಲೆ ಸಿಕ್ಕಿದ್ದೊಂದು ಖುಷಿಯ ವಿಷಯ ….
ಎಲ್ಲಿಗೆ ಹೋದರೂ ಮರಳಿ ಗೂಡಿಂಗೆ ಬರಲೇಬೇಕು ..ಆ ಖುಷಿಯೇ ಅನನ್ಯ !!
ಮನೆಗೆ ಬಂದು ಅಮ್ಮ ಮಾಡಿದ ಹೆಜ್ಜೆ ಮೇಲಾರ ಸಾರು ಮೊಸರು ಉಂಡಪ್ಪಗಳೇ ನಿಜವಾಗಿ ಹೊಟ್ಟೆ ತುಂಬುದು ಹೇಳ್ರೆ ಎಂತ್ತದೂ ಹೇಳಿ ಗೊಂತಪ್ಪದು . .ಉದಿಯಪ್ಪಗ ರೋಟಿ ಧೋಕ್ಲಾ ತಿಂಬಲಿಲ್ಲೆ .. ತೆಳ್ಳವ್ ಬೆಲ್ಲಕಾಯಿಸುಳಿ ಹೇಳಿ ಗ್ರೇಶ್ಯೊಂಡು ಎನ್ನ ಹಾಸಿಗೆಲಿ ವರಗಿ ಇನ್ನುದೇ ಕಾರ್ ಲಿ ಹೋವ್ತಾ ಇದ್ದು ಹೇಳಿ ಕನಸು ಕಂಡುಗೊಂಡು ಗಟ್ಟಿ ವರಗುವ ಖುಷಿಯೇ ಬೇರೆ !!
ಪ್ರವಾಸ ಕಥನ ಬರವಣಿಗೆ ಶೈಲಿ ಒಳ್ಳೇದಿದ್ದು. ಮುಂದುವರಸು.
Dhanyawaadagalu 🙏🏼
Nice..route map…thanks to atal bihari vajpayee and khanduri…you could travel on road without much discomfort… Nice name K2K
Wishing you more such trips
BTW, which vehicle was used?
Innova crysta lli hoddu . Bharatha da uddagalakku olle marga
ಲಾಯ್ಕ ಆಯಿದು …keep writing…👌👍
Thankyou
ತುಂಬಾ ಲಾಯಿಕ ಆಯಿದು ಬರದ್ದದು.
Thankyou somuch 😃
😍😍👍👍
😍🙏🏼
ಲಾಯ್ಕ ಆಯಿದು.
Thankyou 🙏🏼
Aa trip li aanille heli aide ille…enagu hogi bandaangaathu😍