ನಮಸ್ತೆ ಎಲ್ಲೊರಿಂಗುದೇ
ಕಾಣದ್ದೇ ರಜ್ಜ ಸಮಯ ಆತಲ್ಲ. ಇರಲಿ, ಕಳ್ದ ಸರ್ತಿ, ಚಾಕ್ಲೇಟು ತಿಂಬಗ ಅದಲ್ಲಿ ಎಂತೆಲ್ಲ ಹಾಕುತ್ತವೂಳಿ ನೋಡ್ಲೆ ಹೇಳಿತ್ತೆ. ನೋಡದಿದ್ದೀರಾ? ಇನ್ನೂ ನೋಡಿದಿಲ್ಲೇಳಿ ಆದರೆ ನೋಡ್ಲೆ ಸುರು ಮಾಡಿ.
ಸರಿ, ಮಾತುಕತೆ ಮುಂದುವರ್ಸುವ ನಾವು, ಕಳುದ ಲೇಖನಲ್ಲಿ ಚಾಕ್ಲೇಟ್ ಬಗ್ಗೆ ಚೂರು ಹೇಳಿದೆ, ಇಂದು ಅದಕ್ಕೆ ಬೇಕಾದ ಕೋಕೊ/ಕೊಕ್ಕೋ/ಕೋಕ ಬಗ್ಗೆ ಚೂರು ಹೇಳ್ತೆ. ಹೆಚ್ಚಿನ ಹವಿಕರ ಮನೆಲೇ ಕೊಕ್ಕೋ ಅಂತೂ ಇದ್ದೇ ಇಕ್ಕು. ಹೆಚ್ಚಿನವ್ವೆಲ್ಲಾನೋಡಿದ್ದಿ ಅಲ್ದಾ?
ನೋಡದ್ರೆ ಹೇಳಿ, ಇದಾ ಒಂದು ಚಿತ್ರ ಹಾಕುತ್ತೆ ಕೋಕೋದು.

ಇದರ ಕೋಕೊ ಹೇಳಿ ಹೇಳುದು, ನಮ್ಮ ಬಾಷೆ ಲಿ ಎಲ್ಲರೂ ಕೊಕ್ಕೋ ಹೇಳುದು. ಈ ಕೋಕೊ ವರ್ಷಲ್ಲಿ 2 ದೊಡ್ಡ ಬೆಳೆ ಅಪ್ಪದು. ಆದರೆ ವರ್ಷ ಪೂರ್ತಿ ಚೂರು ಚೂರು ಸಿಕ್ಕುತ್ತು. ಕೊಯ್ವಲೆ ನಮ್ಮ ಮಂಗಂಗ ಒಳಿಶಿ ಬಿಟ್ಟದು. ಅಂತೂ 2 ದೊಡ್ಡ ಬೆಳೆ ಸಿಕ್ಕುತ್ತು.
1. ಸೆಪ್ಟೆಂಬರ್- ಜನವರಿ
2. ಏಪ್ರಿಲ್- ಜೂನ್
ಒಳ್ಳೆ ಕ್ವಾಲಿಟೀ ಚಾಕ್ಲೇಟ್ ಸುರು ಅಪ್ಪದೇ ಈ ಕೋಕೊ ಹಣ್ಣಿಂದ. ಅಂದಾಜು ದೊಡ್ಡ ಕೋಕೊ 1-2 ಹಣ್ನಿಂದ 1 ಚಾಕ್ಲೇಟ್ ಬಾರ್ ಮಾಡ್ಳೆ ಆವ್ತು. ಪ್ರತೀ ಕೋಕೊ ಹಣ್ಣಿಲಿ ಅಂದಾಜು 30-40 ಬೀಜಂಗ (ಬೀನ್ಸ್) ಇರ್ತು.
ಕೋಕೊಚರಿತ್ರೆ:
ಕೋಕೊವ ಮೊದಲು ದಕ್ಷಿಣ ಭಾರತಕ್ಕೆ ತಂದದು ಬ್ರಿಟಿಷ್ ಕಂಪೆನಿಯವ್ವು, ಸುಮಾರು 18ನೇ ಶತಮಾನಲ್ಲಿ. ಭಾರತಲ್ಲಿ ಸುಮಾರು 1960-70ಲಿ ಕೋಕೊಗೆ ಆಕ್ಚುವಲ್ ಬೂಮ್ ಬಂದದು. ಕೇರಳಲ್ಲಿ ಕ್ಯಾಡ್ಬರಿಯವ್ವು ಸ್ಯಾಪ್ಲಿಂಗ್ಸ್ ಕೊಡ್ಳೆ ಸುರು ಮಾಡಿ ಕೋಕೊ ಬೆಳವಲೆ ಸುರು ಮಾಡಿ ಅಪ್ಪಗ. ಪ್ರಪಂಚದ ಕೋಕೊ ಪೂರೈಕೆಗೆ ಹೋಲ್ಸಿರೆ, ನಾವು ಉತ್ಪಾದನೆ ಮಾಡುವ ಕೋಕೊ 1% ಅಷ್ಟುದೇ ಇಲ್ಲೆ.
ಎಲ್ಲರಿಂಗೂ ಚಾಕ್ಲೇಟ್ ಬೇಕು, ಮತ್ತೆ ಚಾಕ್ಲೇಟ್ ಸೇವನೆ ತುಂಬಾ ಜಾಸ್ತಿ ಇದ್ದು. ಆದರೆ ಅದಕ್ಕೆ ಬೇಕಾದಷ್ಟು ಕೋಕೊ ಬೆಳೆ ಆವ್ತಿಲ್ಲೆ. ಮತ್ತೆ ಕೋಕೊ ಬೆಳವಲೆ ಹೆಚ್ಚಾಗಿ ಜನ ಅಷ್ಟು ಉತ್ಸಾಹದೇ ತೋರ್ಸುತ್ತವಿಲ್ಲೆ. ಎಂತಕೆ ಹೇಳಿರೆ, ಕೋಕೊಕೆ ಇಪ್ಪ ಮಾರುಕಟ್ಟೆ ಬೆಲೆ ಮತ್ತೆ ಮೌಲ್ಯ ಬೇರೆ ಬೆಳೆಗೆ ಹೋಲ್ಸಿರೆ ತುಂಬಾ ಕಮ್ಮಿ.
ಕೋಕೊ ಭಾರತಲ್ಲಿ ಬೆಳವದು ಮುಖ್ಯವಾಗಿ 4 ರಾಜ್ಯಲ್ಲಿ: ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಮತ್ತೆ ಕರ್ನಾಟಕ. ಹೆಚಿನ ಎಲ್ಲರೂ ವೆಟ್ ಕೋಕೊ ಬೀನ್ಸ್ ನಾ ಕ್ಯಾಂಪ್ಕೋ ಅಥವಾ ಕ್ಯಾಡ್ಬರಿಗೆ ಕೊಡುದು.
ಹೆಚಿನವು ಕೋಕೊ ಮರವ ಕಡುದು ಮುಖ್ಯ ಬೆಳೆ ಮಾತ್ರ ಮಡುಗುತ್ತವು, ಎಂತಕೆ ಹೇಳಿರೆ ಕೋಕೊ ಮರಕೆ ಹಾಕುವ ನೀರಿನ ಮುಖ್ಯ ಬೆಳೆಗೆ ಹಾಕುವಾ ಹೇಳಿ. ಹಾಂಗಾಗಿ ಕೋಕೊ ಉತ್ಪಾದನೆದೆ ಕಮ್ಮಿ ಕಮ್ಮಿ ಆವ್ತಾದ್ದು.
ಕೋಕೊ ವಿಧಂಗೊ:
ಕೋಕೊ ಲಿ ಮುಖ್ಯವಾಗಿ 3 ವಿಧಂಗೊ ಇದ್ದು, Criollo, Forastero and Trinitario . Criollo ಪ್ರೀಮಿಯಮ್ ಕೋಕೊ ತಳಿ ನಮ್ಮ ಭಾರತಲ್ಲಿ ಹೆಚ್ಚಾಗಿ ಬೆಳವದು Forastero ತಳಿ, ಮತ್ತೆ ಈಗ ಎಲ್ಲರೂ ಹೇಳ್ವ ಹೈಬ್ರಿಡ್ ಕೋಕೊ ಹೆಚ್ಚಾಗಿ Trinitario ತಳಿ ಆಗಿರ್ತು.
ತುಂಬಾ ಲೆಕ್ಚರ್ ಆತು ಹೇಳಿ ಕಾಣ್ತು ಅಲ್ದಾ, ಇಲ್ಲಿಗೆ ಸಾಕು ಮಾಡ್ವ ಕೋಕೊ ಬಗ್ಗೆ. ಹೆಚಿನ ಮಾಹಿತಿ ಬೇಕಾರೆ ಎಂಗಳ ಸಂಪರ್ಕ ಮಾಡಿ 😊
Mobile: 9900413128
Email : kokopodschocolate@gmail.com
ಇನ್ನಾಣ ಲೇಖನಲ್ಲಿ ಈ ಕೋಕೊ ಹೇಂಗೆ ಚಾಕ್ಲೇಟಿಂಗೆ ಉಪಯೋಗ ಮಾಡುದು ಹೇಳುದರ ಬಗ್ಗೆ ಚೂರು ಹೇಳ್ತೆ 😊 ಅಲ್ಲಿ ವರೆಗೆ ಎಂಗಳ ಮನೆಲೇ ಬೆಳದ ಕೋಕೊಂದ ಮಾಡಿದ ಕೋಕೋ ಪಾಡ್ಸ್ ನಾ ಶುದ್ಧ ಡಾರ್ಕ್ ಚಾಕ್ಲೇಟಿನ ರುಚಿ ನೋಡಿ 😊
ಹೆರೇ ರಾಮ.