ಕೊಕೊ ಪಾಡ್ಸ್‌ ಚಾಕೋಲೇಟ್

0
175
Coco Pods Chocolate

“ಇದಾ ಪುಟ್ಟ, ನೀನು ಹೇಳಿದು ಕೇಳಿರೆ ಚಾಕಿ ಕೊಡ್ತೆ” ಹೇಳಿದ ಕೂಡ್ಲೆ, ಸಾಬೀತಿಲಿ ಮಕ್ಕೊ ಇರ್ತವು. ಅಂಬಗ ಮಕ್ಕೊಗೆ ಮಾತ್ರ ಈ ಚಾಕಲೇಟು ಪ್ರೀತಿಯೋ? ಕೇಳಿರೆ, ಅಲ್ಲ. ಎಲ್ಲೋರಿಂಗೂ ಪ್ರೀತಿಯೇ. ಶಾಲೆಗೆ ಹೋಪ ಮಕ್ಕಳಿಂದ ಹಿಡುದು ಪ್ರಾಯ ಆದವಕ್ಕುದೇ ಚಾಕ್ಲೇಟು ಹೇಳಿರೆ ಪ್ರೀತಿ. ಹಾಂಗಾದರೆ ಈ ಚಾಕ್ಲೇಟು ತಿಂಬದರಿಂದ ಅಂತೇ ಬಾಯಿ ರುಚಿ ಮಾತ್ರವಾ ಅಥವಾ ಎಂತಾರು ಒಳ್ಳೆ ಗುಣ ಇದ್ದಾ? ಹೇಳಿ ಒಂದು ಸಣ್ಣ ಸಂಶಯ ಬೈಂದಿಲ್ಯಾ ತಲೆಗೆ? ಅಂಬಗ ಕೇಳಿ ಚಾಕ್ಲೇಟು ತಿಂಬದರಿಂದ ಲಾಭ ಇದ್ದು. ಅದರ ಮುಂದೆ ನೋಡುವ.

ಈ ಚಾಕ್ಲೇಟು ಹೇಳಿರೆಂತರ? ಅಂಗಡಿಲಿ ಬಗೆ ಬಗೆ ನಮೂನೆದು ಚಾಕ್ಲೇಟು ಹೇಳಿ ಸಿಕ್ಕುತ್ತು. ಆದರೆ, ನಿಜವಾದ ಚಾಕ್ಲೇಟು ಹೇಳಿರೆ ಕೊಕೊಂದ ಮಾಡಿದ್ದು. ಆ ಕೊಕೊಂದಲೇ ಅದಕ್ಕೆ ಚಾಕೋಲೇಟು ಹೇಳಿ ಹೆಸರು  ಬಂದದು.

ಆಗ ಹೇಳಿದಾಂಗೆ ಚಾಕ್ಲೇಟು ತಿಂಬದರಿಂದ ಲಾಭ ಇದ್ದು. ಯಾವ ಚಾಕ್ಲೇಟು ತಿಂದರೆ ಹೆಚ್ಚು ಲಾಭ/ಒಳ್ಳೆದು? ಕೇಳಿರೆ, ಡಾರ್ಕ್‌ ಚಾಕ್ಲೇಟ್‌ ತಿಂದರೆ ಒಳ್ಳೆದು, ಹೇಳಿರೆ, ಕೊಕ್ಕೋ ಅಂಶ ಯಾವ್ದಲ್ಲಿ ಜಾಸ್ತಿ ಇರ್ತೋ ಹಾಂಗಿಪ್ಪ ಚಾಕ್ಲೇಟ್‌ ತಿಂದರೆ ಆರೋಗ್ಯಕ್ಕೆ ಒಳ್ಳೆದು.

ಎಂತೆಲ್ಲ ಹೇಳಿರೆ:

  • ಹೃದಯದ ಆರೋಗ್ಯಕ್ಕೆ
  • ನೆತ್ತರಿನ ಸಂಚಾರಕ್ಕೆ
  • ಮೆದುಳಿನ ಕಾರ್ಯ ನಿರ್ವಹಣೆಗೆ
  • ಹೀಂಗೆ ಸುಮಾರು ಇದ್ದು
  • ದೇಹ ತೂಕ ಹತೋಟಿಗೆ ತಪ್ಪಲೆ
  • ಚರ್ಮದ ಕಾಂತಿಗೆ (ಚೆಂದ ಕಾಂಬಲೆ)

ಅದರೊಟ್ಟಿಂಗೆ ಶರೀರಕ್ಕೆ ಬೇಕಾದ ಸುಮಾರು ಪೋಶಕಾಂಶವೂ ಅದಲ್ಲಿದ್ದು.

ಅಂಬಗ ಚಾಕ್ಲೇಟು ಒಳ್ಳೆದು ಹೇಳಿ ಕಂಡ ಡಾರ್ಕ್‌ ಚಾಕ್ಲೇಟಿನ ಪೂರ ತಿಂದರಾಗ. ಹೆಚ್ಚು ಸಿಹಿ / ಪ್ರಿಸರ್ವೇಟಿವ್ಸ್ / ರಾಸಾಯನಿಕ ಇಲ್ಲದ್ದೆ ಇಪ್ಪ, ಶುದ್ಧ ಕೋಕೊ ಇಂದ ತಯಾರು ಮಾಡಿದ ಚಾಕ್ಲೇಟ್ಸ್ ತಿಂದರೆ ಒಳ್ಳೆದು. ಆಗ ನಮ್ಮ ಶರೀರಕ್ಕೆ ಬೇಕಾದ ಹೆಚ್ಚು ಪ್ರಯೋಜನಂಗ ಸಿಕ್ಕುತು. ಯಾವ ಹೆದರಿಕೆ ಇಲ್ಲದೆ ನೆಮ್ಮದಿಲಿ ಚಾಕ್ಲೇಟ್ಸ್ ತಿಂಬಲೆ ಅಕ್ಕು ಅಲ್ಲದಾ !!

ಎಲ್ಲಿ ಸಿಕ್ಕುತ್ತು ಈ ನಮೂನೆಯ ಡಾರ್ಕ್ ಚಾಕ್ಲೇಟ್ಸ್ ?

ಅಲ್ಲದಾ? ಅದಕ್ಕೆ ಉತ್ತರ, ಹೀಂಗಿಪ್ಪ ಡಾರ್ಕ್ ಚಾಕ್ಲೇಟ್ಸ್ ನಾ ಎಂಗಳೇ ಮನೆಲಿಯೇ ಕೋಕೋ ಪಾಡ್ಸ್ ಹೇಳು ಹೆಸರಿಲಿ ಮಾಡ್ತ ಇದ್ದೆಯ. ಎಂಗಳ ತೋಟಲ್ಲಿ ಆದ ಕೋಕೊ ಹಣ್ಣಿಂದಲೇ, ಸಿಹಿ ರುಚಿ ಗೆ ಸಕ್ಕರೆ ಅಥವಾ ಬೆಲ್ಲ ಹಾಕಿ‌ ಮಾಡುದು. ಯಾವುದೇ ಕೆಮಿಕಲ್ಸ್ / ಪ್ರಿಸರ್ವೇಟಿವ್ಸ್ / ಆರ್ಟಿಫಿಶಿಯಲ್ ಫ್ಲೇವರ್ಸ್ ಇಲ್ಲೆ ಇದ್ರಲ್ಲಿ. ಎಲ್ಲ ನೈಸರ್ಗಿಕವಾಗಿ ಸಿಕ್ಕುವ ಪದಾರ್ಥಗಳಿಂದಲೇ ಮಾಡ್ತ ಇಪ್ಪದು. ಇದ್ರಲ್ಲಿ ಕೋಕೊದ ಹೆಚಿನ ಪ್ರಯೋಜನಂಗ ಸಿಕ್ಕುವ ಹಾಂಗೆ ಮಾಡಿದ್ದೆಯ.

ಕೋಕೋ ಪಾಡ್ಸ್ʼನ ಮೂಲ ಉದ್ದೇಶ ಎಂತರ ಹೇಳಿರೆ ಚಾಕ್ಲೇಟ್ ಪ್ರಿಯರಿಂಗೆ ಆರೋಗ್ಯವಂತ, ನೈಸರ್ಗಿಕ ರೀತಿಲಿ, ಸಾವಯವ ಪದಾರ್ಥಗಳಿಂದ ಮಾಡಿದ ಚಾಕ್ಲೇಟ್ಸ್ ಕೊಡೆಕ್ಕು. ತಿಂಬಗ ಕುಶಿ ಕುಶೀಲಿ ತಿನ್ನೇಕ್ಕು. ತಿಂದ ಮತ್ತೆ ಪಾಪ ಪ್ರಜ್ಞೆ ಕಾಡುಲೆ ಆಗ (ಅಯ್ಯೋ ಆನಿಂದು ಚಾಕ್ಲೇಟ್ ತಿಂದೆ ಹೇಳಿ).

ಆರೋಗ್ಯಕ್ಕೆ ಪುಷ್ಟಿ ಕೊಡುವಂಥ ಚಾಕ್ಲೇಟ್ಸ್ ತಿಂದು ಎಲ್ಲೋರು ಆರೋಗ್ಯವಂತರಾಗಿರಿ.

ಹಾಂಗಾರೆ ನಿಂಗೊಗೆ ತಿನ್ನೇಕ್ಕು ಇದರ, ಪ್ರಯೋಜನ ಪಡಕೊಳ್ಳೆಕ್ಕೂಳಿ ಆದರೆ ಎಂಗಳ ನಂಬರಿಂಗೆ (9900413128) ಸಂಪರ್ಕ ಮಾಡಿ. ಚಾಕ್ಲೇಟ್ಸ್ ಸೀದಾ ನಿಂಗಳ ಮನೆ ಬಾಗಿಲಿಂಗೆ ಬತ್ತು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೂಳಿ ಆದರೆ, ಎಂಗಳ ಫೇಸ್‌ಬುಕ್‌ & ಇನ್ಸಟಾಗ್ರಾಮ್‌ ಪೇಜಿಂಗೆ ಬಂದು ಮಾಹಿತಿ ತೆಕ್ಕೊಂಬಲಕ್ಕು.

ಈ ಚಾಕ್ಲೇಟಿನ ಹೇಂಗೆ ಮಾಡುದೂಳಿ ಸಂಶಯ ಬಂತೋ? ಇನ್ನಾಣ ಲೇಖನ ಮಾಲೆಲಿ ತಿಳ್ಶುತ್ತೆಯ, ಆತಾ.

ಅಲ್ಲಿವರೆಗೆ ಕಾಂಬ.
ರಾಮ್ ರಾಮ್

LEAVE A REPLY

Please enter your comment!
Please enter your name here