ನೇಂದ್ರ ಮುಟ್ಟಿರೆ ಜಾಗ್ರತೆ..

1
95
ನೇಂದ್ರ ಮುಟ್ಟಿರೆ ಜಾಗ್ರತೆ

ನೇಂದ್ರ ಮುಟ್ಟಿರೆ ಜಾಗ್ರತೆ…
ಹಲ್ವ ಮಾಡ್ತೇ ಹೇಳ್ಯಪ್ಪಾಗ ಒಂದು ಅಶರೀರವಾಣಿ ಕೇಳಿತ್ತು…
ದೇವೀ… ನಿನಗೆಯೇ ನೈವೇದ್ಯಕ್ಕೆ ಮಾಡ್ತಾ ಇಪ್ಪದು, ಕೃಪೆದೋರು ಹೇಳಿ ಪ್ರಾರ್ಥನೆ ಮಾಡಿಕ್ಕಿ ಹೆರಟೆ…
ಬೆದ್ರಾಡಿ ಭಾವಯ್ಯಂಗೆ ಒಂದು ಪೋನು ಮಾಡಿ ಕೇಳಿದೆ, ಭಾವಯ್ಯ, ನೇಂದ್ರ ಹಲ್ವಾ ಮಾಡುವಾಗ ಶೆಕ್ಕರೆ ಬದಲು ಬೆಲ್ಲ ಹಾಕಿರೆಂತ?
ಎನಗರಡಿಯ ಭಾವಾ ಆನು ಇದುವರೆಗೆ ಟ್ರೈ ಮಾಡಿದ್ದಿಲ್ಲೆ ಹೇದ.
ಅಂತೂ ಧೈರ್ಯ ಮಾಡಿ ಕುಕ್ಕರಿಲಿ ನಾಕು ನೇಂದ್ರ ಬೇವಲೆ ಮಡಗಿದೆ.
ಇತ್ಲಾಗಿ ಮುಕ್ಕಾಲು ಕೆಜಿ ಬೆಲ್ಲ ಕರಗುಸಿ ಮಡಗಿದೆ.
ಬೆಂದ ನೇಂದ್ರ ತುಂಡುಗಳ ಕಡದು ಮಾವ ಕೊಟ್ಟ ಬೆಳ್ಳಿಯ ಉರುಳಿಗೆ ಹಾಕಿದೆ.
ಬೆಲ್ಲ ಕರುಗುಸಿದ್ದರ ಸೋರುಗಿದೆ… ಯಬಾ… ನೋಡುದೆಂತರ… ಟೊಮೆಟ ಸಾರಿನ ಹದಕ್ಕೆ ಬಯಿಂದು… ಮಂದ ಹೇಳಿರೆ ಬಯಂಕರ ಮಂದ…
ಕಾಸುಲೆ ಸುರುಮಾಡಿದೆ, ದೇವರು ಮಡಗಿದ ಹಾಂಗಾವ್ತು ಹೇಳಿ…
ಒಂಚೂರು ಹೊತ್ತು ಕಾಸಿ ಅಪ್ಪಾಗ ಕಂಡತ್ತು, ಇದು ದೇವರಿಂದ ಅಪ್ಪ ವೈವಾಟಲ್ಲ, ಆನೇ ಮಾಡೆಕ್ಕಷ್ಟೇ ಹೇಳಿ, ಧೈರ್ಯಮಾಡಿ ನಾಕು ಮುಷ್ಟಿ ಗೋಧಿ ಹೊಡಿ ಸೋರುಗಿ ಸಮಾ ಕಾಸುಲೆ ಸುರು ಮಾಡಿದೆ…
ತುಪ್ಪದ ಕರಡಿಗ್ಗೆ ಕೈ ಹಾಕೇಕ್ಕೂ ಹೇಳಿ ಮನಸ್ಸಿಲಿ ಗ್ರೇಶಿದ್ದೇ ತಡ, ಇನ್ನೊಂದು ಅಶರೀರವಾಣಿ – ಊರಿಂದ ತಂದ ತುಪ್ಪ ಮುಟ್ಟಿರೆ ಜಾಗ್ರತೆ…
ಥೋಕ್ಕ್… ಇದಾತು ಕತೆ, ಹೇಳಿ ಗ್ಯಾಸು ಆಫ್ ಮಾಡಿ ಸ್ಕೂಟರ್ ಹತ್ತಿ ಓಡಿದೆ ಪೇಟಗೆ… 2 ಪೆಕೇಟು ತುಪ್ಪ ನೇಲ್ಸಿಗೊಂಡು ಬಂದು ಒಂದು ಪೆಕೇಟು ತುಪ್ಪವ ಹಾಕಿ ಕಾಸುದರ ಮುಂದುವರಿಸಿದೆ.
ಅಂತೂ ಗಟ್ಟಿ ಆಯ್ಕೊಂಡು ಬಂತು.
ಹಲ್ವದ ಬದಲು ಮೈಸೂರು ಪಾಕಿನ ಹಾಂಗೇ ಗುಳ್ಳೆ ಗುಳ್ಳೆ, ಬುರುಬುರು ಟೆಕ್ಸ್ಚರ್ ಬಪ್ಪಲೆ ಸುರು ಆತು…
ಅಂಬಗ ಇಳುಗುಲಕ್ಕೂ ಹೇಳಿ ಕಂಡತ್ತು.
ಒಂದು ಬಟ್ಲಿಂಗೆ ಸೊರುಗಿ ತಟ್ಟಿ ಲೆವೆಲ್ ಮಾಡಿದೆ. 2 ಗಂಟೆಹೊತ್ತು ಮಗನ ಹೆರ ಆಟ ಆಡ್ಸಿ ಬಂದು ನೋಡುವಾಗ ಎಂತಾ ಕತೆ !!!
ನೈವೇದ್ಯ ಆಯಿದು…!!!
ಕಟ್ ಮಾಡ್ಲೆ ನೋಡ್ತೇ ಎಂತಾ ಮಾಡಿರೂ ಕಟ್ಟಾಗ…
ಪಿಶಕತ್ತಿಗೆ ಅಂಟುದರ್ಲಿ ಎಂತಾ ಮಾಡ್ಲು ಎಡಿಯ.
ಹೆಂಗೋ ಬಙ್ಙ ಬಂದು ಕಟ್ ಮಾಡಿ ಆತು. ಕಟ್ ಮಾಡಿದ ಪೀಸುಗಳೂ ಒಂದಕ್ಕೊಂದು ಅಂಟಿ ಬಿಡುಸುಲೇ ಬಾರ. ಇನ್ನು ಆತಿಲ್ಲೆ ಕತೆ ಹೇಳಿ ಅದರ ಉಂಡೆ ಮಾಡುವ ಹಾಂಗೇ ಕೈಲಿ ಉರುಳಿಸಿ ಉರುಳಿಸಿ ಮಡುಗಿದೆ…. ಲಾಯ್ಕ ನಿಂದತ್ತು…
ತಿಂದು ನೋಡಿದೆ… ವಾಹ್ಹ್ಹ್… ಸೂಪರ್ ರುಚಿ…
ಹಾಂಗೇ ಒಂದು #ಬೆಲ್ನೇಂದ್ರ_ಹಲ್ವ ಪುರಾಣಮ್ ಸಂಪೂರ್ಣಮ್ !!!

1 COMMENT

LEAVE A REPLY

Please enter your comment!
Please enter your name here