ಸಣ್ಣ ಮಾಣಿಯ ದೊಡ್ಡ ಸುದರಿಕೆ

ಸಣ್ಣ-ಮಾಣಿಯ-ದೊಡ್ಡ-ಸುದರಿಕೆ.

ಈ ಅನುಪತ್ಯಂಗಳಲ್ಲಿ ಬಳುಸುದೂ ಹೇಳ್ರೆ ಅದರದ್ದೇ ಒಂದು ರಾಮಾಯಣ. ಕೆಲವು ಕಡೆ ಕೊದಿಲು ಆದ ಮೇಲೆ ಹೋಳಿಗೆ ಮತ್ತೆ ಮೇಲಾರ ಮಜ್ಜಿಗೆ,‌ಕೆಲವು ಕಡೆ ಕೊದಿಲು ಮೇಲಾರ ಹೋಳಿಗೆ ಹೀಂಗೆ..

ಇದೆಲ್ಲ ದೊಡ್ಡವು,ಗುರಿಕ್ಕಾರು ಆ ಮನೆಯವರ ಸೀಮೆಯವರು ಮಂಡೆ ಬೆಶಿ ಮಾಡೆಕ್ಕಾದ ಸಮಾಚಾರ. ಎನ್ನ ತಲೆಬೆಶಿ ಅದಲ್ಲ.
ಈ ಮೊದಲಾಣ ಹಂತಿಲಿ ಕೂದರೆ ಒಳ್ಳೆ ದೇವರಿಂಗೆ ನೈವೇದ್ಯ ಅಪ್ಪ ಮೊದಲು ಪ್ರಸಾದಕ್ಕೆ ಕೈ ಹಾಕಿದವನ ಅಜ್ಜಂಗೊ ನೋಡಿದ ಹಾಂಗೆ ನೋಡುದು. ” ನಿನಗೆಂತದಾ ಜವ್ವನಿಗ, ಬಳುಸುಲೆ ಬಾರಾ” ಹೇಳಿ.

ಇವರ ಮಾತಿಂಗೆ ಸಿಕ್ಕಿ ಬಳುಸುಲೆ ನಿಂದರೆ ಎನ್ನ ಕತೆ ಮುಗುತ್ತು. ತಾಳು ಎಲ್ಲಿ ಬಳುಸುದು? ಅಶನ ಎಷ್ಟು ಹಾಕುದು? ಎಲೆಗೆ ತಾಗಂದಾಂಗೆ ಬಾಳೆಲೆಗೆ ಬಳುಸುದು. ಸಾರು ,ಕೊದಿಲು ಕಥೆ ಬಿಡಿ. ಅದರ ಸರಿಯಾಗಿ ಬೇಗ ಬಳುಸುಲೆ ಭಯಂಕರ ಅನುಭವ ಬೇಕನ್ನೆ. ಹಾಂಗೆ ಎನಗೆ ಉಪ್ಪು ಬಳುಸುಲೆ ಕೊಟ್ಟವು.

ಹಂತೀಲಿ ಕೂದ ಪರಬ್ಬಂಗೋ ಅಲ್ಲಿ ಅಲ್ಲದಾ ಇಲ್ಲಿ,ಇಲ್ಲಿ ಅಲ್ಲದಾ ಅಲ್ಲಿ ಹೇಳಿ ಹಿಂಸೆ ಕೊಟ್ಟು, ಅದಾ ಸಾರು ಬಂತು ಈ ಮಾಣಿದು ಇನ್ನೂ ಉಪ್ಪು ಬಳುಸಾಣವೇ ಮುಗುದ್ದಿಲ್ಲೆ. ಸೈಡಿಂಗೆ ಹೋಗಾ ಹೇಳಿ ಮರ್ಯಾದೆ ತೆಗದವು.

ಈ ಸಣ್ಣ ಮಕ್ಕೊ ಭಾರೀ ಉಮೇದು ಇಪ್ಪವಕ್ಕೆ ಬಳುಸುಲೆ ಸರೀ ಬತ್ತಿಲ್ಲೆ. ಅವಕ್ಕೆ ನೀರು,ಹಪ್ಪಳ ಎಲ್ಲಾ ಜವಾಬ್ದಾರಿ. ಅವಕ್ಕೆ ಅದೇ ಗರ್ವದ ವಿಷಯ.
ಹಾಂಗೆ ಅವು ನೀರು ಯಾವಾಗ ಹೇಂಗೆ ಕೊಟ್ಟರೂ ನಡತ್ತು.

ಎನ್ನ ಈ ಬಳುಸುವ ಕೆಲಸಲ್ಲಿ ಇದ್ದ ಬದ್ದ ಖಾಲಿ ಜಾಗೇಲೆಲ್ಲ ತುರುಕಿ ಈ ಮಾಣಿ ಏತಕ್ಕೂ ಪ್ರಯೋಜನ ಇಲ್ಲೆ ಹೇಳಿ ನೀರು ಕೊಡುಲೆ ಕಳಿಸಿದವು.‌ಅಲ್ಲುದೇ ಒಂದು ಸಣ್ಣ ಪಿಟ್ಟೆ ಎನಗಿಂತ ಬೇಗ ನೀರು ಕೊಟ್ಟು ಮುಗುಶಿದ.
ಬೇಕಾ ಎನಗೆ?

ಅದಕ್ಕೆ ಆನೀಗ ಅನುಪತ್ಯಕ್ಕೆ ಹೋದರೆ ” ಏ ಅದರಾ ಹಿಡ್ಕೋ” ” ಏ ಇದರ ಹಿಡ್ಕೋ” ಹೇಳಿ ಅತ್ಲಾಂಗಿಂದ ಇತ್ಲಾಗಿ ,ಇತ್ಲಾಂಗಿಂದ ಅತ್ಲಾಗಿ ಓಡುದು. ಭಾರೀ ಗಡಿಬಿಡಿಲಿ ಇಪ್ಪ ಹಾಂಗೆ. ಎಲ್ಲಾ ರನ್ನಿಂಗಿಲಿ ಕವರ್ ಆವ್ತು.

ಅರ್ಧ ಊಟ ಅಪ್ಪಗ ಆಚ ಕಡೆ ಬಫೆ‌‌ ಸುರು ಆದರೆ ಮೆಲ್ಲಂಗೆ ಪಣಾಂದೆ ಪದ್ರಾಡ್.
ನಿಂಗಳಲ್ಲಿಯೂ ಎನ್ನಾಂಗಿಪ್ಪ ಒಪ್ಪಣ್ಣಂಗೊ ಇಕ್ಕಲ್ದ!

1 COMMENT

  1. ಓಹೋ .. ಮೊನ್ನೆ ಆಚೆ ಮನೆ ತಮ್ಮನ ಮದುವೇಲಿ ಅಶನ ಬಳ್ಸಿಕ್ಕಿ ಮಧ್ಯಲ್ಲಿ ಪದ್ರಾಡ್ ಆದ್ದು ಆರು ಹೇಳಿ ಗೊಂತಾತು ಈಗ …

LEAVE A REPLY

Please enter your comment!
Please enter your name here