ಗುಡ್ಡೆಯ ಮೇಲೊಂದು ದೇವಸ್ಥಾನ

temple on hill

ಮಂಗಳೂರಿಗೆ ಹೋಪಗ ಪ್ರತಿಯೊಬ್ಬರುದೆ ನೇತ್ರಾವತಿ ಹೊಳೆಯ ಇನ್ನೊಂದು ಹೊಡೆಲಿಪ್ಪ ರ ಗುಡ್ಡೆಯ ಮೇಲೆ ಒಂದು ದೇವಸ್ಥಾನ ನೋಡಿಪ್ಪಿ..ಆದರೆ ಅಲ್ಲಿಗೆ ಯಾವತ್ತಾದರೂ ಭೇಟಿ ಕೊಟ್ಟಿದೀರಾ??
ಹೆಚ್ಚಿನವಕ್ಕೆ ಈ ದೇವಸ್ಥಾನದ ಹೆಸರು,ದಾರಿ ಎರಡೂ ಗೊಂತಿರ !!
ಇನೋಳಿ , ನೇತ್ರಾವತಿ ಹೊಳೆಯ ತಟಲ್ಲಿಪ್ಪ ಒಂದು ಹಳ್ಳಿ.ಇನೋಳಿ ಗ್ರಾಮದ ಒಂದು ಗುಡ್ಡೆಯ ಕೊಡೀಲಿ ಈ ದೇವಸ್ಥಾನ ಸ್ಥಾಪಿತ ಆಗಿಪ್ಪದು.ಈ ಗುಡ್ಡೆಗೆ ‘ದೇವಂದಬೆಟ್ಟ’ ಹೇಳಿ ಹೆಸರಡ.ಈ‌ ಊರಿನ ಗ್ರಾಮ ದೇವಸ್ಥಾನ,
ಶ್ರೀ ಸೋಮನಾಥೇಶ್ವರ ದೇವಸ್ಥಾನ. ಇದೊಂದು ಐತಿಹಾಸಿಕ ಹಾಂಗೆಯೇ ಪ್ರೇಕ್ಷಣೀಯ ಸ್ಥಳ.ಈ ದೇವಸ್ಥಾನಕ್ಕೆ ಸುಮಾರು 3000 ವರ್ಷಗಳ ಇತಿಹಾಸ‌ ಇದ್ದಡ.

ಮಂಗಳೂರಿಂದ 28 ಕಿ.ಮೀ ಹಾಂಗೆಯೇ ಮುಡಿಪ್ಪಿಂದ 12 ಕಿ.ಮೀ ದೂರಲ್ಲಿದ್ದು.ದೇವಸ್ಥಾನದವರೆಗೂ ಮಾರ್ಗ ಇದ್ದು.ಕಾರು,ಬೈಕ್ ಗಳಲ್ಲಿದೆ ನಿಂಗ ಇಲ್ಲಿಗೆ ಬಪ್ಪಲಕ್ಕು.
ಫರಂಗಿಪೇಟೆಂದ ದೋಣಿಯ ಮೂಲಕ ನೇತ್ರಾವತಿ ಹೊಳೆ ದಾಟಿ ಇನೋಳಿ ಗ್ರಾಮಕ್ಕೆ ಬರೆಕವಾತ್ತು.ಅಲ್ಲಿಂದ ಗುಡ್ಡೆಯ ಮೇಲಂಗೆ ರಜ್ಜ ಹೊತ್ತು ನಡಕ್ಕೊಂಡು ಹೋಯೆಕ್ಕು.
ಮಂಗಳೂರಿಂದ ಬಪ್ಪವ್ವು ಉಳ್ಳಾಲ ಸೇತುವೆಂದ ರಜ ಮುಂದೆ ಎಡತ್ತಿಂಗೆ ತಿರುಗಿ ಎಲ್ಯಾರುಪದವು-ಇನೋಳಿ ಮಾರ್ಗ ಆಗಿ ಬರೆಕು.ಮುಡಿಪ್ಪಿಂದ ಬಪ್ಪವ್ವು ಕೊಣಾಜೆ – ಪಜೀರು ಮಾರ್ಗ ಆಗಿ ಬರೆಕು.
ಪಜೀರಿಂದ ಇನೋಳಿ ಹೊಡೆ ಹೋಪಗ ಬಲತ್ತಿಂಗೆ ದೇವಸ್ಥಾನದ ದ್ವಾರ ಸಿಕ್ಕುತ್ತು. ಆ ದಾರಿಲಿ ರಜ ಮುಂದೆ ಹೋದಪ್ಪಗ ದೇವಸ್ಥಾನ ಸಿಕ್ಕುತ್ತು.
ಮಂಗಳೂರು ಹ ಮತ್ತೆ ಮುಡಿಪ್ಪಿಂದ ಇನೋಳಿಗೆ ಬಸ್ ಬೇಕಾದಷ್ಟಿದ್ದು.ದೇವಸ್ಥಾನದ ಎದುರು ವಿಶಾಲವಾದ ಮೈದಾನ,ಹೂಗಿನ ತೋಟ ಇದ್ದು.ಹಾಂಗೆಯೇ ಒಂದು ಭಾರಿ‌ ದೊಡ್ಡ ‘ಘಂಟೆ’ ಇದ್ದು.
ದೇವಸ್ಥಾನದ ಮೂರೂ ದಿಕ್ಕಿಲಿಯುದೆ ಮೈದುಂಬಿ ಹರವ ನೇತ್ರಾವತಿ ಹೊಳೆ ಕಣ್ಣು ತುಂಬುತ್ತು. ಈ ದೇವಸ್ಥಾನ ಸದ್ಯ ರಜ ಸಮಯ ಮೊದಲು ಜೀರ್ಣೋದ್ಧಾರ ಆದ್ದಷ್ಟೆ. ದೇವಸ್ಥಾನದ ಒಳ ವಿಶಾಲವಾದ ಗರ್ಭಗುಡಿ ಇದ್ದು.
ಗರ್ಭಗುಡಿಯ ಸುತ್ತ ಇಪ್ಪ ಕಲ್ಲಿನ ಕಂಬಂಗ ದೇವಸ್ಥಾನದ ಅಂದವ ಹೆಚ್ಚಿಸುತ್ತು. ಪ್ರತಿದಿನ ಉದಿಯಪ್ಪಗ 6 ಗಂಟೆಂದ ಮಧ್ಯಾಹ್ನ 1 ಗಂಟೆವರೆಗೆ ದೇವಸ್ಥಾನ ತೆರೆದಿರ್ತು.
ಸೋಮವಾರ ಮಾತ್ರ ಹೊತ್ತೋಪಗ 5 ರಿಂದ 7.30 ವರೆಗೆದೆ ತೆರೆದಿರ್ತಡ.ಪ್ರತಿದಿನ ಮಧ್ಯಾಹ್ನ ಇಲ್ಲಿ ಊಟದ ವ್ಯವಸ್ಥೆ ಇದ್ದು.ಇಲ್ಲಿ ಜನಜಂಗುಳಿ ಇಲ್ಲೆ. ಒಳ್ಳೆ ಪ್ರಶಾಂತವಾದ ಪ್ರದೇಶ.ಇಲ್ಲಿಯಾಣ ಪ್ರಾಕೃತಿಕ ಸೌಂದರ್ಯ ಮನಸ್ಸಿಂಗೆ ತುಂಬಾ ಖುಷಿ ಕೊಡ್ತು.
ದೇವಾಲಯದ ಸುತ್ತ ವಾಯುವಿಹಾರ ಮಾಡಿಯೊಂಡು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುಲಕ್ಕು.ಈ ಗುಡ್ಡೆಂದ ಸುತ್ತ ನೋಡಿದರೆ SRINIVAS, EXPERT ವಿದ್ಯಾಸಂಸ್ಥೆಗ, ಫರಂಗಿಪೇಟೆ , ಪಶ್ಚಿಮ ಘಟ್ಟದ ಸುಮಾರು ಗುಡ್ಡೆ-ಬೆಟ್ಟಂಗ ಅಲ್ಲದ್ದೇ ಇನ್ನೂ ಕೆಲವು ಊರುಗ ಕಾಂಬಲೆ ಸಿಕ್ಕುತ್ತು.
ನವಿಲುಗ ಸ್ವಚ್ಛಂದವಾಗಿ ಓಡಾಡಿಕೊಂಡು ಇರ್ತು.ಹೊತ್ತೋಪಗಾಣ ಹೊತ್ತಿಲಿ ಮನೆಯವರೊಟ್ಟಿಂಗೆ ಮತ್ತೆ ದೋಸ್ತಗಳೊಟ್ಟಿಂಗೆ ಕಾಲ ಕಳವಲೆ ಇದೊಂದು ಭಾರಿ ಲಾಯ್ಕ ಜಾಗೆ ಮಾತ್ರ ಇದು.Photoshootಗೆದೆ ಒಳ್ಳೆ ಜಾಗೆ.

ಇಲ್ಲಿಯಾಣ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ್ದ ಕಾರಣ ಹೆರಾಂದ ಜನಂಗ ಇಲ್ಲಿಗೆ ಬಪ್ಪದು ಕಮ್ಮಿ. ದಕ್ಷಿಣ ಕನ್ನಡದಲ್ಲಿ ಹೀಂಗಿಪ್ಪ ಪ್ರೇಕ್ಷಣೀಯ ಸ್ಥಳಂಗ ಸುಮಾರಿದ್ದು. ನಮ್ಮ ಜಿಲ್ಲೆಲಿ ಪ್ರವಾಸೋದ್ಯಮಕ್ಕೆ ಬೇಕಾಷ್ಟು ಅವಕಾಶಂಗ ಇದ್ದು.
ಸರಕಾರ ಇಂತಹ ತಾಣಂಗಳ ಗುರುತಿಸಿ ಪ್ರವಾಸಿ ಸ್ಥಳ ಅಪ್ಪ ಹಾಂಗೆ ಅಭಿವೃದ್ಧಿಪಡಿಸೆಕ್ಕು.ನಿಂಗಳ ಊರಿಲಿ ಆರಿಂಗು ಗೊಂತಿರದ ಪ್ರೇಕ್ಷಣೀಯ ಸ್ಥಳಂಗ ಇದ್ದರೆ,
ಅದಕ್ಕೆ ಹೆಚ್ಚೆಚ್ಚು ಪ್ರಚಾರ ಕೊಡಿ.ಜನರಿಂಗೆ ಹೀಂಗಿಪ್ಪ ಸ್ಥಳೀಯ ತಾಣಂಗೊಕ್ಕೆ ಭೇಟಿ ನೀಡುವ ಹಾಂಗೆ ಪ್ರೇರೇಪಿಸಿ.ನಮ್ಮ LOCAL ಜಾಗೆಗಳ GLOBAL ಮಾಡುವ, ಆಗದೋ?!

1 COMMENT

LEAVE A REPLY

Please enter your comment!
Please enter your name here