ನವಗೆಲ್ಲೋರಿಂಗು ಬೇರೆ ಬೇರೆ ಹವ್ಯಾಸ ಇಪ್ಪ ಹಾಂಗೆ ಎಂಗೊಗೆ ಪ್ರವಾಸ ಹೋಪದೇ ಹವ್ಯಾಸ . ಈ ಕರೋನಂದಾಗಿ ಈ ವರ್ಷದ ಪ್ರವಾಸಂಗ ಇಲ್ಲೆನ್ನೇಳಿ ಬೇಜಾರಲ್ಲಿ ಇಪ್ಪಾಗ , ಮೊದಲು ಹೋದ ಪ್ರವಾಸಂಗಳ ನೆನಪು ಮಾಡ್ತಾ , ೨ ವರ್ಷದ ಹಿಂದೆ ಸಿಂಗಾಪುರ- ಮಲೇಷ್ಯಾಕ್ಕೆ ಹೋದ ಕಥೆ ಹೇಳ್ವಾಳಿ ಆತು . ಹಾಂಗೆ ನೆನಪ್ಪಾದ್ದರ ಗೀಚಿದ್ದೆ .
ಒಂದರಿ ಅಪ್ಪ, ಅಮ್ಮ, ಆನು ತಂಗೆ ಬೊಂಬಾಯಿ ವಿಮಾನ ನಿಲ್ದಾಣಲಿ ಇಪ್ಪಾಗ ಸಿಂಗಾಪುರ್ ಏರ್ಲೈನ್ಸಿನ ವಿಮಾನ ನೋಡಿ, “ಇದಾ ಮಕ್ಕಳೆ , ನಿಂಗ ಒಂದರಿ ಸಿಂಗಾಪುರಕ್ಕೆ ಹೋಪಲಕ್ಕಲ್ಲ, ಎಂಗ ಹೇಂಗು ಹೋಗಿ ಆಯ್ದು” ಹೇಳಿದವು .
ಕುಶಾಲಿಂಗೆ ಹೇಳಿದ್ದಾದಿಕ್ಕು…. ಆದರೆ ಎಂಗ ಬಿಡ್ಲೆ ಇದ್ದ… ಸಿಕ್ಕಿದ್ದೆ ಚಾನ್ಸು ಹೇಳಿ ಮನೆಗೆ ಎತ್ತಿದ ಕೂಡ್ಲೆ ಅಪ್ಪಂಗೆ ಬೆಣ್ಣೆ ಹಚ್ಚುಲೆ ಸುರು. ಅಪ್ಪ ಎಂಗಾ ಸಿಂಗಾಪುರ್ ಯಾವಾಗ ಹೋಪಲೆ? ಎಂಗಳೆ ಹೋವ್ತೆಯ ಅಪ್ಪಾ ಹೇಳಿ. ದಿನಾ ಇದನ್ನೆ ಕೇಳಿ ಕೇಳಿ, ಅಪ್ಪ ಒಂದು ದಿನ – ನಿಂಗಳೆ ಎಲ್ಲ ವ್ಯವಸ್ಥೆ ಮಾಡ್ತರೆ ಹೋಗಿ. ಆನು ಪೈಸೆ ಕೊಡುದು ಮಾತ್ರ. ನೋಡ್ವಾ ನಿಂಗಳ ಸಾಮರ್ಥ್ಯಾಳಿ ಹೇಳಿದವು. ಎಂಗ, ಸಿಕ್ಕಿದ್ದೆ ಚಾನ್ಸ್ . ಇದರ ಬಿಡ್ಲೆ ಇಲ್ಲೇಳಿ ಅಪ್ಪನ ಚ್ಯಾಲೆಂಜ್ ಒಪ್ಪಿದೆಯ .
ಎಂಗ ಹೋಪ, ಎಲ್ಲ ಟೂರಿನ ಬುಕ್ ಮಾಡುದು ಅಮ್ಮ. ಹಾಂಗೆ ಅಮ್ಮನ ಸಹಾಯಂದ ಯಾವ ಏಜೆಂಟಿನ ಎಲ್ಲ ಕಾಂಟ್ಯಾಕ್ಟ್ ಮಾಡುದೂಳಿ ಎಲ್ಲ ಹುಡ್ಕಿ, ನಿರ್ಮಲ್ ಟ್ರಾವೆಲ್ಸ್ ಅಕ್ಕೂಳಿ ನಿರ್ಣಯ ಮಾಡಿದೆಯ. ಅವರ ಪ್ಯಾಕೆಜಿಲಿ ಬರೇ ಸಿಂಗಾಪುರ ಇತ್ತಿದಿಲ್ಲೆ, ಮಲೇಷ್ಯಾವೂ ಇತ್ತು . ಹಾಂಗೆಳಿ ಅಮ್ಮಂಗೆ ಹೇಳಿಯಪ್ಪಗ ,ಓಹ್! ಒಳ್ಳೆದಾತನ್ನೆ. ಒಂದು ಪರ್ಮಿಶ್ಶನ್ಲಿ ಎರಡು ದೇಶಕ್ಕೆ ಹೋಪ ಚಾನ್ಸ್ ನಿಂಗಳದ್ದು, ಬೇಗ ಬುಕ್ ಮಾಡೀಳಿ ಹೇಳಿದ್ದೇ ಹೇಳಿದ್ದು, ಬೆಂಗಳೂರಿನ ಅವರ ಆಫೀಸಿಂಗೆ ಹೋಗಿ ಎಲ್ಲ ಬುಕ್ ಮಾಡ್ಸಿ ಎಂತೆಲ್ಲ ಬೇಕೂಳಿ ಮಾತು ಕಥೆ ಮಾಡಿ ಆನುದೆ ತಂಗೆದೆ ಬಂದೆಯ.
ಎನ್ನ 20ನೇ ವರ್ಷಲ್ಲಿ ಇಷ್ಟೆಲ್ಲಾ ಮಾಡ್ತ ಇಪ್ಪ ಹೆಮ್ಮೆ. ವಿಸಾ apply ಮಾಡಿ , ಚೆಕ್ ಕೊಟ್ಟು ಎಲ್ಲ ತಯಾರಿ ಮಾಡಿಗೊಂಡೆಯ…
ಮಕ್ಕಳ ಇಬ್ಬರನ್ನೆ ಕಳ್ಸುತ್ತಾ ಇದ್ದೀರಾ?. ಎಂಥಾರು ಆದರೆ ಎಂಥಾ ಮಾಡುದೂಳಿ ಎಲ್ಲ ಹೆದರಿಸಿದರೂ, ಆರ ಮಾತನ್ನು ತಲೆಗೆ ಹಾಕದ್ದೆ ಎಂಗಳ ಕಳ್ಸಿಕೊಟ್ಟಿದವು.
ಹಾಂಗೆ ಮಲೇಷ್ಯಾಕ್ಕೆ ಹೋಪ ದಿನಾ ಬಂದೇ ಬಿಟ್ಟತ್ತು . ಹೆರಡ್ವ ದಿನ ಚೂರು ಪುಕು ಪುಕು ಹೇಳಿದ್ದು. ಅಯ್ಯೋ ಎಂಗಳೆ ಹೋಯೆಕ್ಕನ್ನೇ ಇನ್ನು ಹೇಂಗಪ್ಪಾ? ಬೇಡಾ ಇತ್ತಾಳಿ ಎಲ್ಲ ಮನಸಿಲೆ ಗ್ರೆಶಿಯೋಂಡು , ಅಪ್ಪ ಅಮ್ಮನ ಆಶೀರ್ವಾದ ತೆಕ್ಕೊಂಡು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆರಟೆಯ. ಎಂಗಳ ಟೂರ್ ಗೈಡ್, ಎಂಗಳ ಗ್ರೂಪ್ ಎಲ್ಲ ಅಲ್ಲಿಯೆ ಸಿಕ್ಕುಲೆ. ಟೂರ್ ಗೈಡ್ ಎಂಗಳ ನೋಡಿ ಆಶ್ಚರ್ಯ. ಅಕ್ಕ ತಂಗಿ ಇಬ್ಬರೆಯಾ ?? ದೊಡ್ಡವರು ಯಾರು ಇಲ್ವಾ?
ಎಲ್ಲರು 40- 50 ರ ಮೇಲಾಣವ್ವೆ ಇತ್ತದು. ಗುಂಪಿಲಿ ಸಣ್ಣವು ಎಂಗಳೆ. ಅಯ್ಯೋ ಆರು ಇಲ್ಲೆಯಾ ಎಂಗಳ ಪ್ರಾಯದವ್ವೂಳಿ ಬೇಜಾರಾತು. ಹಾಂಗೆ ವಿಮಾನ ನಿಲ್ದಾಣ ಒಳ ಹೋದೆಯಾ, immigration ಲಿ ಎನ್ನ 15 ವರ್ಷದ ತಂಗೆಯ ನೋಡಿ , ನೀನು – ಅಕ್ಕ ಮಾತ್ರ ಹೊವ್ತಾ ಇಪ್ಪದಾ? ಒಳ್ಳೆಯದಾಗಲಿ . ಮಜಾ ಮಾಡೀಳಿ ಹೇಳಿ ಭಾರತಂದ ಕಳ್ಸಿ ಕೊಟ್ಟವು. ಎಂಗಳದ್ದು direct ವಿಮಾನ ಅಲ್ಲ. ಬೆಂಗಳೂರಿಂದ ಶ್ರೀಲಂಕ ಮತ್ತೆ ಅಲ್ಲಿಂದ ಬೇರೆ ಫ್ಲೈಟ್ ಹತ್ತಿ ಮಲೇಷ್ಯಾ. ಹಾಂಗೆ ಎಂಗೋಗೆ ಶ್ರೀಲಂಕಕ್ಕು ಹೋದಾಂಗೆ ಆತು. ದೇಶ ನೋಡದ್ರು ವಿಮಾನ ನಿಲ್ದಾಣಲ್ಲಿ ಇಳುದ್ದೆಯ . ಇನ್ಸ್ಟಾಗ್ರಾಮ್ ಲಿ ಲೊಕೇಶನಿಂಗೆ ಆತಿದಾ!!
ಶ್ರೀಲಂಕಾ ವಿಮಾನ ನಿಲ್ದಾಣ ಎಲ್ಲ ನೋಡಿಕ್ಕಿ ಮಲೇಷ್ಯಾ ವಿಮಾನ ಹತ್ತಿದೆಯ. ಇರುಳಿಡಿ ಸಿನೆಮಾ ನೋಡಿಗೊಂಡೆ ಕಾಲ ಕಳದೆಯ. ವರಗಿ ಮಕ್ಕಳೇಳಿ ಹೇಳ್ಲೆ ಅಪ್ಪ ಅಮ್ಮ ಇಲ್ಲೆನ್ನೆ. ಎಂಗಳದ್ದೆ ಕಾರುಬಾರು . ಮರು ದಿನ ಮಲೇಷ್ಯಾ ಎತ್ತಿಯಪ್ಪಾಗ ಅಲ್ಲಿ ನೋಡ್ಲೆ ಎಡಿತ್ತಾ ವರಕ್ಕು ತೂಗುದರಲ್ಲಿ. ಇರುಳು ವರಕ್ಕಿಲ್ಲೆನ್ನೆ. ಅಂಬಗ ಗೊಂಥಾತು ಅಪ್ಪ ಅಮ್ಮನ ಮಾತು ಎಂತಕೆ ಕೇಳಕ್ಕಾದ್ದೂಳಿ!!

ಸುರುವಾಣ ದಿನ ಮಲೇಷ್ಯಾದ ರಾಜಧಾನಿ ಕೌಲಾಲಂಪುರ್ ಎಲ್ಲ ನೋಡಿಕ್ಕಿ ರೂಮಿಂಗೆ ಹೋದ ಕೂಡ್ಲೆ ವರಗಿದೆಯ. ಜೆಟ್ ಲಾಗ್ ದೆ ಆಗಿತ್ತಿದು. ಮರು ದಿನ ಬಾಟು ಗುಹೆ ನೋಡಿ, ಕೆ.ಎಲ್ ಟವರ್ ಹತ್ತಿ ಇಡೀ ಪೇಟೆಯ ನೋಡಿದೆಯ. ವಾಚ್ ಫ್ಯಾಕ್ಟರಿಂದ ಅಪ್ಪ ಅಮ್ಮಂಗೆ ವಾಚ್ ತೆಕೊಂಡೆಯ. ಫಾರಿನ್ ಚಾಕ್ಲೇಟ್ ತೆಕೊಂಡೆಯ . ಮರು ದಿನ ಜೆಂಟಿಂಗ್ ಹೈಲ್ಯಾಂಡ್ ಹೇಳ್ವಲ್ಲಿಂಗೆ ಹೋದ್ದು. ಅದು ಏಷ್ಯಾದ 4 ನೇ ಅತಿ ದೊಡ್ಡ ಹೋಟೆಲ್. ಭಯಂಕರ ಲಾಯ್ಕ ಇತ್ತು. ಇಡಿ ಒಂದು ಗುಡ್ಡೆಯನ್ನೆ ರೆಸಾರ್ಟ್ ಮಾಡಿದ್ದವು. ಅಲ್ಲಿಗೆ ಹೋಪಲೆ ರೋಪ್ ವೇ .

ಅದರ ಒಳ ಹೋದರೆ ಲೋಕವೇ ಬೇರೆ. ಮಾಲ್, ಸಿನೆಮಾ ಥಿಯೇಟರ್, ಕ್ಯಾಸಿನೊ, ಬೇರೆ ಬೇರೆ ದೇಶದ ರೆಸ್ಟೋರೆಂಟ್ ಗಾ. ಇಲ್ಲೆ ಹೇಳುದು ಇಲ್ಲೆ ಅಲ್ಲಿ. ಎಂಗೊಗೆ ಅಲ್ಲಿ ಕ್ಯಾಸಿನೊಕ್ಕೆ ಹೋಯ್ಕೂಳಿ ಭಾರಿ ಇತ್ತಿದ್ದು. ಆದರೆ 21 ವರ್ಷಂದ ಸಣ್ಣವಕ್ಕೆ ಬಿಡ್ತಿಲ್ಲೇಳಿ ಎಂಗಳ ಹೆರ ಕಳ್ಸಿದವು . ಅಷ್ಟನ್ನಾರ ಎಂಗಳೇ ದೊಡ್ಡ ಜನಂಗಾಳಿ ಗ್ರೇಶಿಯೊಂಡಿತ್ತದ್ದು ಪೂರ ಇಳುದತ್ತು.
ಅಲ್ಲಿ ಒಂದು ದಿನ ಉಳುದು ಮರು ದಿನ ಮಲೇಷ್ಯಾಂದ ಸಿಂಗಾಪುರ್ ಹೋಪ ದಿನ. ಬಸ್ ಲೆ ಮಲೇಷ್ಯಾಂದ ಸಿಂಗಾಪುರ್ ಹೋಪಲೆ. ಮಲೇಷ್ಯಾ ಸಿಂಗಾಪುರ್ ಗಡಿ ಲಿ ಪುನಾ ವಲಸೆ, ವೀಸಾ ಚೆಕ್ ಆದಿಕ್ಕಿ ಸಿಂಗಾಪುರಕ್ಕೆ ಬಂದೇ ಬಿಟ್ಟೆಯಾಳಿ ಭಾರಿ ಸಂತೋಷ ಆತು. ಮಲೇಷ್ಯಾ ಒಂದು ರೀತಿ ಚಂದಾ ಆದರೆ ಸಿಂಗಾಪುರ್ ಮತ್ತೊಂದು ರೀತಿಲಿ ಚಂದ. ಎಲ್ಲವು ಆಧುನೀಕರಿಸಿದ, ವ್ಯವಸ್ಥಿತ ದೇಶ. ಒಂದು ಸೆಕೆಂಡ್ದೇ ಲೇಟ್ ಅಪ್ಪಲಾಗ ಅಲ್ಲಿ. ಅಷ್ಟುದೇ ಸಮಯ ಪ್ರಜ್ಞೆ.

ಸಿಂಗಾಪುರ್ ಲಿ ಸೆಂಟೋಸಾ ದ್ವೀಪ, ಜುರಾಂಗ್ ಬರ್ಡ್ ಪಾರ್ಕ್, ಸಿಂಗಾಪುರದ Merlion – ಅರ್ಧ ಸಿಂಹ ಅರ್ಧ ಮೀನಿನ ಹಾಂಗಿಪ್ಪ ಪ್ರತಿಮೆ ಇಲ್ಯಾ. ಅದರ ಎದುರು ಫೋಟೋ ತೆಗೆಶಿಯೋಂಡಲ್ಲಿಗೆ ನೆಮ್ಮದಿ ಆತು. ಅಬ್ಬಾ! ಅಂತೂ ಈ ಪ್ರತಿಮೆ ನೋಡಿ ಆತ್ತನ್ನೇಳಿ ಖುಶಿ.
ಮರು ದಿನ ಯೂನಿವರ್ಸಲ್ ಸ್ಟುಡಿಯೋ ಲಿ ಏಷ್ಯಾ ದ ೨ನೇ ಅತಿ ದೋಡ್ಡ ರೋಲರ್ ಕೋಸ್ಟರ್ ಲಿ ಕೂದೆಯ!! . ಎಂಗಳ ಗ್ರೂಪಿನವ್ವು ಆರು ಕೊಯಿದವಿಲ್ಲೆ. ಎಂಗ ಇಬ್ರೆ ಕೂದ್ದು. ಕಣ್ಣು ಮುಚ್ಚಿ ಕೂದ್ದು ತಲೆ ಕೆಳ ಕಾಲು ಮೇಲೆ, ಒಟ್ರಾಶಿ ಹೆಂಗೆಲ್ಲಾ ಹೋಯ್ದು ಹೇಳಿ ಗೊಂತಿಲ್ಲೆ. ಬೊಬ್ಬೆ ಹಾಕಿ ಸ್ವರ ಮಾತ್ರ ಹೊಯ್ದು ಎಂಗಳದ್ದು.

ಹಾಂಗೆ ಸಿಂಗಾಪುರ- ಮಲೇಷ್ಯಾ – ಶ್ರೀಲಂಕ ಹೋಗಿ ವಾಪಸ್ ಭಾರತಕ್ಕೆ ಬಪ್ಪ ದಿನವೂ ಬಂತು . ವಾಪಸ್ ಬಪ್ಪಾಗ ಮನೆಗೆ ಹೋಗಿ ಎಂತ್ತೆಲ್ಲಾ ಹೇಳೆಕ್ಕು ಅಪ್ಪ ಅಮ್ಮಂಗೆ ಹೇಳಿ ಮೆಲುಕು ಹಾಕುತ್ತಾ , ಗ್ರೂಪ್ನವಕ್ಕು , ಎಂಗಳ ಲಾಯ್ಕಕ್ಕೆ ವಾಪಸ್ ಕರಕ್ಕೊಂಡು ಬಂದ ಗೈಡಿಂಗು ಟಾಟಾ ಹೇಳಿಕ್ಕಿ ಮನೆಗೆ ಮುಟ್ಟಿದೆಯ .
ಮಕ್ಕ ಸಣ್ಣಾ ಸಣ್ಣಾ, ಅವ್ವು ಮಾತ್ರ ಎಂತದೂ ಮಾಡಿಯೊಂಬಲೆ ಎಡಿಯಾ ಹೆೇಳುದರ ಕೇಳಿ ಕೇಳಿ ನಿಜವಾಗಿಯು ಎಂಗೋಗೆ ಎಂತದೂ ಎಡಿಯಾ ಹೇಳುವ ಸ್ಥಿತಿಗೆ ಬಂದು ನಿಲ್ತವು ಮಕ್ಕಾ . ಆದರೆ ಎಂಗಳ ಅಪ್ಪ ಅಮ್ಮ ಹಾಂಗಲ್ಲ … ನಿಂಗೋಗೆ ಎಡಿಯದ್ದು ಯಾವ್ದು ಇಲ್ಲೆ , ಹೆರಡಿ ಹೇಳಿ ಆತ್ಮವಿಶ್ವಾಸ ತುಂಬಿ ಸಣ್ಣದಿಪ್ಪಗಳೆ ಅಭ್ಯಾಸ ಮಡ್ಸಿದ ಕಾರಣ , ಎಂಗ ಇಬ್ರೆ ಹೊಯ್ಕೊಂಡು ಬಂದೆಯ …. ಅದರಿಂದಾಗಿ ಎಂಗ ಎಲ್ಲಿಗೂ ಹೋಗಿ ಬಪ್ಪೆಯ ಹೇಳುವ ಆತ್ಮವಿಶ್ವಾಸ ಸಾಮರ್ಥ್ಯ ಇದ್ದು ಹೇಳುವ ಖುಷಿ ! ಮಕ್ಕಳ ಉತ್ಸಾಹಕ್ಕೆ ತಣ್ಣೀರು ಹಾಕದ್ದೆ ಪ್ರೋತ್ಸಹ ನೀಡುವ ಅಪ್ಪ ಅಮ್ಮ ಎಲ್ಲೊರಿಂಗು ಸಿಕ್ಕಲಿ ಹೇಳಿ ಹಾರೈಕೆ
Odule kaathuravagi Kautha idde.. Innu Innu Bare
Thankyou Appa.. Heenge pravasa kalsutha iri.. Heenge baretha irthe🤝
Baari laikaidu baraddu…Ella Appa ammangu..makkoge spoorthi koduva msg nottinge nilsiddu laikaidu 😃
Saaku heli nilsulille baravadara….
Suuuper adithi…innu heenge baretta iru….
Baari laika aidu…innu tumba desha sutti..illi bare..all the best🙌
ಬಾರೀ ಲಾಯಿಕ ಬರದ್ದೆ ಕೂಸೆ…ಒಟ್ಟಿಂಗೆ ಹೋದ ಅನುಭವ ಆತು…
Keep it up