ನಮ್ಮ ಮಕ್ಕೊಗೆ ಯಾವ ಶಾಲೆ ಅಕ್ಕು?

which school is best for our kid

ಈ ಸಮಯ ಹೆತ್ತವರ ದೊಡ್ಡ ತಲೆಬೆಶಿಯ ವಿಷಯ ಮಕ್ಕಳ ಯಾವ ಶಾಲೆಗೆ ಸೇರ್ಸುದು ಹೇಳಿ.

ಸ್ನೇಹಿತರ ಹತ್ತರೆ, ನೆಂಟ್ರ ಹತ್ತರೆ, ನೆರೆಕರೆಯೋರ ಹತ್ತರೆ, ಫೇಸ್ಬುಕ್ಕಿಲ್ಲಿ, ಗೂಗಲ್ಲಿಲ್ಲಿ ಎಲ್ಲ ಕಡೆಲಿಯೂ ಕೇಳುದು, ಹುಡ್ಕುದು.

ಈ ವಿಷಯದ ಬಗ್ಗೆ ನವಗೆ ಸಮಗ್ರ ಮಾಹಿತಿ ಒಂದೇ ದಿಕ್ಕೆ ಹೇಳಿ ಸಿಕ್ಕುತ್ತಿಲ್ಲೆ.

ಅದೂ ಅಲ್ಲದ್ದೆ ನಾವು ಗಮನಿಸೆಕಾದ ಮುಖ್ಯ ಅಂಶ ಯಾವುದು ಹೇಳಿಯೂ ನವಗೆ ಕೆಲವು ಸರ್ತಿ ಗೊಂತಿರ್ತಿಲ್ಲೆ. ಅಲ್ಲದ?

ಹಾಂಗಾರೆ ಶಾಲೆಯ ಆಯ್ಕೆ ಹೇಂಗೆ ಹೇಳುದರ ಬಗ್ಗೆ ರಜ್ಜ ಮಾತಾಡುವ ಇಂದು

 • ಯಾವ ಪಠ್ಯ(ಸಿಲಬಸ್) ಹೇಳುದು ಒಂದು ಅಂಶ. ಇದರ ಬಗ್ಗೆ ಅಂತರ್ಜಾಲಲ್ಲಿಯೂ, ಶಾಲೆಗಳಲ್ಲಿಯೂ ಮಾಹಿತಿ ಸಿಕ್ಕುತ್ತು. ಅದರ ಆಧಾರಲ್ಲಿ ನಮ್ಮ ಮಕ್ಕೊಗೆ ಯಾವುದು ಹೇಳಿ ಆಯ್ಕೆ ಮಾಡ್ಲಕ್ಕು. ಇದು ದೊಡ್ಡ ತಲೆಬೆಶಿಯ ವಿಷಯ ಅಲ್ಲ.
 • ಮುಖ್ಯವಾಗಿ ನಾವು ಗಮನಿಸೆಕಪ್ಪದು ಶಾಲೆಯ ಧ್ಯೇಯ, ಸಿದ್ಧಾಂತಂಗೊ. ಅವರ ಆಶಯ ಎಂತರ ಹೇಳುದು. ಮಕ್ಕೊ ಪಠ್ಯ ಕಲ್ತು ಹೆಚ್ಚು ಮಾರ್ಕ್ಸ್ ತೆಕ್ಕೊಂಬದು, ರ್ಯಾಂಕ್ ಬಪ್ಪದು ಮಾಂತ್ರ ಮುಖ್ಯ. ಪಠ್ಯೇತರ, ಹೇಳಿರೆ ಆಟ, ಕ್ರೀಡೆ, ಕಲೆ, ಸಾಹಿತ್ಯ, ಎನ್.ಸಿ.ಸಿ. ಇತ್ಯಾದಿ ವಿಷಯಂಗಳ ಬಗ್ಗೆ ಆಸಕ್ತಿ ಕಮ್ಮಿ ಇಪ್ಪ ಶಾಲೆ ಹೇಳಿ ಆದರೆ ಅದು ನಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒಳ್ಳೆದಲ್ಲ.
 • ಪಠ್ಯದಷ್ಟೇ ಅಥವಾ ಅದರಿಂದ ಹೆಚ್ಚು ಮುಖ್ಯ ಮಕ್ಕಳಲ್ಲಿ ಮೌಲ್ಯಂಗಳ ಬೆಳಶುದು. ಅದು ಮಕ್ಕಳ ವ್ಯಕ್ತಿತ್ವವ ಸರಿಯಾಗಿ ರೂಪಿಸುತ್ತು. ಹಾಂಗಾಗಿ ಮೌಲ್ಯಶಿಕ್ಷಣಕ್ಕೆ ಪ್ರಾಮುಖ್ಯ ಕೊಡುವ ಶಾಲೆ ಆಯಕು.
 • ಶಿಕ್ಷಣದ ವಿಧಾನ. ಮಕ್ಕಗೆ ಪಾಠ ಮಾಡುವ ವಿಧಾನ ತುಂಬ ಮುಖ್ಯ. ಸಣ್ಣ ಮಕ್ಕೊಗೆ ಕಲುಶುಲೆ ಮಾಂಟೆಸ್ಸರಿ ವಿಧಾನ ತುಂಬ ಸರಳವೂ ಸುಲಭವೂ. ಆದರೆ ಅದಕ್ಕೆ ವಿಶೇಷ ತರಬೇತಿ ಇಪ್ಪ ಶಿಕ್ಷಕರು ಇರೆಕಾವ್ತು. ಅದಿದ್ದರೆ ಒಳ್ಳೆದು. ಅದಿಲ್ಲದ್ದರೂ ಮಕ್ಕಳ ಮನಸ್ಸಿನ, ಬೌದ್ಧಿಕ ಮಟ್ಟವ ಅರ್ಥ ಮಾಡಿಗೊಂಡು ಪಾಠ ಮಾಡುವ ಶಿಕ್ಷಕರು/ಶಾಲೆ ಒಳ್ಳೆದು.
 • ಒಂದು ತರಗತಿಲಿ ಹೆಚ್ಚು ಸಂಖ್ಯೆಯ ಮಕ್ಕೊ ಇಪ್ಪದಾದರೆ ಅಲ್ಲಿ ಮಕ್ಕಳ ಬಗ್ಗೆ ಗಮನ ಕೊಡುಲೆ ಅವಕಾಶ ಇರ್ತಿಲ್ಲೆ. ಹಾಂಗಿದ್ದಲ್ಲಿ ಕಲಿಯುವಿಕೆ ಕಷ್ಟ. ಒಂದು ತರಗತಿಲಿ ಮೂವತ್ತು ಅಥವಾ ಅದಕ್ಕಿಂತ ಕಮ್ಮಿ ಸಂಖ್ಯೆ ಮಕ್ಕೊ ಇಪ್ಪ ಶಾಲೆ ಉತ್ತಮ.
 • ಮಕ್ಕೊಗೆ ಪಠ್ಯ ಮತ್ತೆ ಪಠ್ಯೇತರ ವಿಷಯಂಗಳ ಕಲಿಕೆಲಿ ಆಸಕ್ತಿ ಮೂಡುಸುವ, ಕಲುಶುವ ಉತ್ಸಾಹ ಶಾಲೆಗೆ, ಶಿಕ್ಷಕರಿಂಗೆ ಇರೆಕು. ಒಟ್ಟಿಂಗೇ ನಿಧಾನಕ್ಕೆ ಕಲಿವ ಮಕ್ಕೊಗೆ ತಾಳ್ಮೆಂದ ಕಲುಶುವ ನಿಪುಣತೆಯೂ ಬೇಕು.
 • ಮಕ್ಕಳೊಟ್ಟಿಂಗೆ ಶಿಕ್ಷಕರ ವರ್ತನೆಯೂ ಮುಖ್ಯ. ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ಬಗ್ಗೆ ರಜ್ಜ ಆದರೂ ತಿಳಿವಳಿಕೆ ಶಿಕ್ಷಕರಿಂಗೆ ಇರೆಕು.
 • ಶಾಲೆಯ ಗ್ರಂಥಾಲಯ, ಆಟದ ಮೈದಾನ, ಶುಚಿತ್ವಕ್ಕೆ ಕೊಡುವ ಮಹತ್ತ್ವ ಇತ್ಯಾದಿ ತುಂಬ ಮುಖ್ಯ.
 • ಶಿಕ್ಷೆಯ ಹೆಸರಿಲ್ಲಿ ಮಕ್ಕಳ ಅತಿಯಾಗಿ ಶೋಷಣೆ ಮಾಡದ್ದೆ ಇಪ್ಪ, ಆದರೆ ಅಗತ್ಯ ಇಪ್ಪಷ್ಟು ಕಟ್ಟುನಿಟ್ಟಾದ ನಿಯಮಂಗಳ ಅನುಸರಿಸುವ ಶಾಲೆ ಆಗಿರೆಕು.
 • ಮಕ್ಕಳ ಬೆಳವಣಿಗೆಗೆ ಶಾಲೆ, ಶಿಕ್ಷಕರು ಮತ್ತೆ ಕುಟುಂಬದವ್ವೂ ಮುಖ್ಯ. ಹಾಂಗಾಗಿ ಆಗಾಗ ಹೆತ್ತವರ ಒಟ್ಟಿಂಗೆ ಮಾತಾಡಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಚರ್ಚೆ, ಸಂವಾದ ಮಾಡುವ ಶಾಲೆ ಆದರೆ ಒಳ್ಳೆದು.
 • ಮುಖ್ಯವಾದ ಒಂದು ಅಂಶ ಹೇಳಿರೆ ಶಾಲೆಲಿ ಮಕ್ಕಳಲ್ಲಿ ರಾಷ್ಟ್ರೀಯತೆಯ, ಸಾಮಾಜಿಕ ಸಾಮರಸ್ಯದ ಮನೋಭಾವವ ಬೆಳಶುವ ವಾತಾವರಣ ಇರೆಕು.
 • ಸಣ್ಣ ಮಕ್ಕೊಗೆ ಆದರೆ ಮನೆಗೆ ಹತ್ತರೆ ಇಪ್ಪ ಶಾಲೆ ಒಳ್ಳೆದು.

ಈ ವಿಷಯದ ಬಗ್ಗೆ ವಿವರವಾಗಿ ಹೇಳ್ತರೆ ತುಂಬ ವಿಷಯ ಇದ್ದು. ಇದಿಷ್ಟು ತುಂಬ ಮುಖ್ಯವಾದ ವಿಚಾರ. ಹಾಂಗಾಗಿ ಇಲ್ಲಿ ಇಷ್ಟು ವಿಷಯಂಗಳ ಬಗ್ಗೆ ಮಾತಾಡಿದ್ದು.

[ಈ ಲೇಖನ ಮಾಲಿಕೆಯ ವಿಷಯಂಗಳ ಬಗ್ಗೆ ಪ್ರಶ್ನೆಗ, ಅನುಮಾನಂಗ ಇದ್ದರೆ drsuvarninikonale@gmail.com ಗೆ ಪತ್ರ ಬರವಲಕ್ಕು.]

LEAVE A REPLY

Please enter your comment!
Please enter your name here